ರೈಡರ್ಗಳಾದ ಅಸ್ಲಾಮ್ ಇನಾಂದರ್ ಹಾಗೂ ಮೋಹಿತ್ ಗೊಯತ್ ಅವರ ಅಮೋಘ ರೈಡಿಂಗ್ ನೆರವಿನಿಂದ ಪುಣೇರಿ ಪಲ್ಟಾನ್ ಹರ್ಯಾಣ ವಿರುದ್ಧ 41-28 ಅಂಕಗಳಿಂದ ಭರ್ಜರಿ ಗೆಲುವು ದಾಖಲಿಸಿತು.
ಹೈದ್ರಾಬಾದ್ನ ಗಾಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ಭಾರೀ ಅಂತರದ ಜಯ ಸಾಸಿತು.ಪುಣೇರಿ ಪಲ್ಟಾನ್ ಮೊದಲ ಅವಧಿಯಲ್ಲಿ ಪುಣೇರಿ ತಂಡ 20-10 ಅಂಕಗಳಿಂದ ಮುನ್ನಡೆ ಪಡೆಯಿತು.
ಪುಣೇರಿ ಪರ ರೈಡರ್ಗಳಾದ ಅಸ್ಲಾಮ್ ಇನಾಂದರ್ 10, ಮೋಹಿತ್ ಗೊಯತ್ 10, ಆಕಾಶ್ ಶಿಂಧೆ 7 ಅಂಕ ತಂದುಕೊಟ್ಟರು.
ಹರ್ಯಾಣ ಪರ ರೈಡರ್ಗಳಾದ ಪ್ರಪಂಜನ್ 8, ಮೀತು ಶರ್ಮಾ 4, ವಿನಯ್ 4 ಅಂಕ ತಂದುಕೊಟ್ಟರು.
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತೆಲುಗು ಟೈಟಾನ್ಸ್ ವಿರುದ್ಧ 36-28 ಅಂಕಗಳಿಂದ ಗೆಲುವು ಸಾಸಿತು.ಮೊದಲಾರ್ಧದಲ್ಲಿ ಬೆಂಗಾಲ್ ತಂಡ 14-13 ಅಂಕಗಳಿಂದ ಗೆಲುವು ಪಡೆಯಿತು.
ಬೆಂಗಾಲ್ ಪರ ನಾಯಕ ಹಾಗೂ ರೈಡರ್ ಮಣಿಂದರ್ ಸಿಂಗ್ 12 ಅಂಕ, ಶ್ರೀಕಾಂತ್ ಜಾಧವ್ 7 ಅಂಕ ಸಂಪಾದಿಸಿದರು. ತೆಲುಗು ಪರ ಅಭಿಷೇಕ್ ಸಿಂಗ್ 9, ಸಿದ್ದಾರ್ಥ್ ದೇಸಾಯಿ 8 ಅಂಕ ಪಡೆದರು.