ತಾರಾ ಆಟಗಾರ್ತಿ ಮಣಿಕಾ ಭಾತ್ರ ಪ್ರತಿಷ್ಠಿತ ಏಷ್ಯನ್ ಕಪ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಸೆಮಿಫೈನಲ್ ತಲುಪಿದ ಭಾರತದ ಮೊದಲ ಮಹಿಳಾ ಆಟಾರ್ತಿ ಎಂಬ ಹಿರಿಮೆಗೆ ಪಾತ್ರಾಗಿದ್ದಾರೆ.
ಬ್ಯಾಂಕಾಕ್ ಹುಹಾ ಮಾಕ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿಫೈನಲ್‍ನಲ್ಲಿ ಮಣಿಕಾ ಭಾತ್ರ ಚೀನಾ ಥೈಪೈನ ಚೆನ್ ಜು ಯೂ ವಿರುದ್ಧ 4-3 ಅಂಕಗಳ ಸೆಟ್‍ಗಳಿಂದ ಗೆದ್ದರು.
ಅಮೋಘ ಪ್ರದರ್ಶನ ನೀಡಿದ ಮಣಿಕಾ 23ನೇ ಶ್ರೇಯಾಂಕಿತೆ ವಿರುದ್ಧ 6-11, 11-6, 11-5, 11-7, 8-11,9-11,9-11,11-9 ಅಂಕಗಳಿಂದ ಗೆದ್ದು ಸಂಭ್ರಮಿಸಿದರು.
ಜಿದ್ದಾಜದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಮಣಿಕಾ ಮೊದಲ ಸುತ್ತಿನಲ್ಲಿ ಸೋತರೂ ಎರಡನೆ ಸುತ್ತಿನಲ್ಲಿ ಗೆದ್ದ ತಿರುಗೇಟು ಕೊಟ್ಟರು.
ಮೂರನೆ ಮತ್ತು ನಾಲ್ಕನೆ ಸುತ್ತನ್ನು ಗೆದ್ದು 3-1 ಸೆಟ್‍ಗಳಿಂದ ಅಂತರ ಹೆಚ್ಚಿಸಿಕೊಂಡರು. ಈ ಗೆಲುವಿನ ಮೂಲಕ ಮಣಿಕಾ ಚೀನಿ ಆಟಗಾರ್ತಿ ವಿರುದ್ಧ 4-2 ಅಂಕಗಳಿಂದ ಸೋಲಿನ ಅಂತರ ಕಡಿಮೆ ಮಾಡಿಕೊಂಡರು.
ಏಷ್ಯನ್ ಕಪ್ ಇತಿಹಾಸದಲ್ಲೇ ಭಾರತದ ಅತ್ಯುತ್ತಮ ಸಾಧನೆಯಾಗಿದೆ.2015 ಮತ್ತು 2019ರಲ್ಲಿ ಅಚಂತಾ ಶರತ್ ಕಮಾಲ್ ಮತ್ತು ಸತ್ಯನ್ ಕ್ರಮವಾಗಿ ಇಬ್ಬರು ಆರನೆ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.
ಮಣಿಕಾ ಭಾತ್ರ ಗುರುವಾರ ವಿಶ್ವದ ಏಳನೆ ಶ್ರೇಯಾಂಕಿತೆ ಆಟಗಾರ್ತಿ ಚೆನ್ ಕ್ಷಿಂಗ್‍ಟಾಂಗ್ ವಿರುದ್ಧ ಗೆದ್ದು ಅಚ್ಚರಿ ಮೂಡಿಸಿದ್ದರು.
ಮಣಿಕಾ ಇಂದು ನಡೆಯುವ ಸೆಮಿಫೈನಲ್‍ನಲ್ಲಿ ವಿಶ್ವದ ಐದನೆ ಶ್ರೇಯಾಂಕಿತೆ ಜಪಾನ್‍ನ ಮಿಮಾ ಇಟೊ ವಿರುದ್ಧ ಸೆಣಸಲಿದ್ದಾರೆ.