Pro Kabaddi: ಸಮಬಲ ಸಾಧಿಸಿದ ಪಾಟ್ನಾ-ಪುಣೇರಿ
ಪ್ರೋ ಕಬಡ್ಡಿ ಲೀಗ್‌ನ ಎರಡನೇ ದಿನದ ರೋಚಕ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು 35-35 ಅಂಕಗಳಿಂದ ಸಮಬಲ ಸಾಧಿಸಿದವು.
ಇದು ಈ ಋತುವಿನ ಮೊದಲ ಸಮಬಲ ಸಾಧಿಸಿ ಪಂದ್ಯ ಇದಾಗಿದೆ. ಪ್ರಥಮಾರ್ಧದಲ್ಲಿ 23-16ರಿಂದ ಮುನ್ನಡೆ ಕಂಡಿದ್ದ ಪುಣೇರಿ ಪಲ್ಟನ್ ದ್ವಿತಿಯಾರ್ಧದಲ್ಲಿ ಆ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ನಡುವೆ ಆಲೌಟ್ ಆದದ್ದು ತಂಡದ ಮನೋಬಲ ಕುಸಿಯಲು ಕಾರಣವಾಯಿತು. ಪಾಟ್ನಾ ಪೈರೇಟ್ಸ್ ಎದುರಾಳಿಗೆ ಏಳು ಬೋನಸ್ ಅಂಕಗಳನ್ನು ನೀಡಿದ್ದು ಜಯದಿಂದ ವಂಚಿತವಾಗಲು ಪ್ರಮುಖ ಕಾರಣವಾಯಿತು.
ಮೂರು ಬಾರಿ ಚಾಂಪಿಯನ್ ತಂಡ ಪಾಟ್ನಾ ಪೈರೇಟ್ಸ್ ಆರಂಭದಲ್ಲಿ ಉತ್ತಮ ರೀತಿಯಲ್ಲೇ ಮುನ್ನಡೆ ಕಂಡಿತ್ತು, ಪಂದ್ಯದ 10ನೇ ನಿಮಿಷದಲ್ಲಿ ಪುಣೇರಿ ಪಲ್ಟನ್ ಆಲೌಟ್ ಆಗುವ ಮೂಲಕ ಪಾಟ್ನಾ ಪೈರೇಟ್ಸ್ 12-9ರ ಅಂತರದಲ್ಲಿ ಮುನ್ನಡೆ ಕಂಡಿತ್ತು. ಆದರೆ ಆ ನಂತರ ಪಾಟ್ನಾ ಪೈರೇಟ್ಸ್ ಪಂದ್ಯದ ಮೇಲೆ ಹಿಡಿತ ಕಳೆದುಕೊಂಡಿತು. ನಿತರಂತರವಾಗಿ ಎದುರಾಳಿ ತಂಡಕ್ಕೆ ಅಂಕಗಳನ್ನು ನೀಡಿತು. ಆ ಮೂಲಕ ಪಾಟ್ನಾ ಪೈರೇಟ್ಸ್ ಕೂಡ ಆಲೌಟ್ ಆಗಿ ಪ್ರಥಮಾರ್ಧದಲ್ಲಿ 16-23 ಪುಣೇರಿ ಪಲ್ಟನ್ ಮೇಲುಗೈ ಸಾಧಿಸಿತು.
ದ್ವಿತಿಯಾರ್ಧದ ಆರಂಭದಿಂದಲೇ ಪಾಟ್ನಾ ಪೈರೇಟ್ಸ್ ಆಕ್ರಮಣಕಾರಿ ಆಟ ಆರಂಭಿಸಿತು. ರೈಡಿಂಗ್‌ನಲ್ಲಿ ಸಚಿನ್ ಹಾಗೂ ವಿಶ್ವಾಸ ನಿರಂತರ ಯಶಸ್ಸು ಕಂಡರು. ಪರಿಣಾಮ ಪುಣೇರಿ ಪಲ್ಟನ್ ಆಲೌಟ್, ಈ ಹಂತದಲ್ಲಿ ಪಾಟ್ನಾ ಪೈರೇಟ್ಸ್ 26-24 ಅಂತರದಲ್ಲಿ ಮುನ್ನಡೆ ಕಂಡಿತು. ಸಚಿನ್ ಹಾಗೂ ರೋಹಿರ್ ಗೂಲಿಯಾ ತಂಡದ ಮುನ್ನಡೆಗೆ ನೆರವಾದರು.
ಪಾಟ್ನಾ ಪೈರೇಟ್ಸ್ ಪರ ಸಚಿನ್ ರೈಡಿಂಗ್‌ನಲ್ಲಿ 7 ಅಂಕಗಳನ್ನು ಗಳಿಸಿದರೆ, ರೋಹಿತ್ ಗೂಲಿಯಾ 6 ಅಂಕಗಳನ್ನು ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ತ್ಯಾಗರಾಜನ್ ಹಾಗೂ ಸುನಿಲ್ ಸೇರಿ ಟ್ಯಾಕಲ್‌ನಲ್ಲಿ 6 ಅಂಕಗಳನ್ನು ಗಳಿಸಿದರು.
ಪುಣೇರಿ ಪಲ್ಟನ್ ಪರ ಅಸ್ಲಾಮ್ ಇನಾಮ್ದಾರ್ 7, ಮೋಹಿತ್ ಗೊಯತ್ 8 ಹಾಗೂ ಆಕಾಶ್ ಶಿಂಧೆ 6 ರೈಡಿಂಗ್ ಅಂಕಗಳನ್ನು ಗಳಿಸಿ ತಂಡಕ್ಕೆ ನೆರವಾದರು. ಬಾದಲ್ ಸಿಂಗ್ ಮತ್ತು ಅಲಂಕಾರ್ ಪಾಟಿಲ್ ಟ್ಯಾಕಲ್‌ನಲ್ಲಿ ಒಟ್ಟು 5 ಅಂಕಗಳನ್ನು ಗಳಿಸಿದರು.
ಆದರೆ ಈ ಮುನ್ನಡೆ ಹೆಚ್ಚು ಕಾಲ ಉಳಿಯಲಿಲ್ಲ, ಉತ್ತಮ ರೈಡಿಂಗ್ ಮೂಲಕ ತಿರುಗೇಟು ನೀಡಿದ ಪುಣೇರಿ ಪಲ್ಟನ್ 30-30ರಲ್ಲಿ ಸಮಬಲಗೊಳಿಸಿತು. ನಿರಂತರ ಬೋನಸ್ ಅಂಕಗಳನ್ನು ಗಳಿಸಿದ ಪುಣೇರಿ ಪಲ್ಟನ್ ಒಂದು ಪಂದ್ಯ ಮುಗಿಯಲು ನಾಲ್ಕು ನಿಮಿಷ ಬಾಕಿ ಇರುವಂತೆ 32-31ರಲ್ಲಿ ಮೇಲುಗೈ ಸಾಧಿಸಿತು.
Pro Kabaddi, Patna Pirates, Tie, Puneri Paltan