Pro Kabaddi: ಎರಡನೇ ದಿನ ಎರಡನೇ ಪಂದ್ಯವೂ ಸಮಬಲ
ಗುಜರಾತ್ ಜಯಂಟ್ಸ್ ಮತ್ತು ತಮಿಳು ತಲೈವಾಸ್ ತಂಡಗಳ ನಡುವಿನ ಪಂದ್ಯ 31-31ರಲ್ಲಿ ಸಮಬಲಗೊಳ್ಳುವುದರೊಂದಿಗೆ ಪ್ರೋ ಕಬಡ್ಡಿ ಲೀಗ್ನ ಎರಡನೇ ದಿನದ ಎರಡನೇ ಪಂದ್ಯವೂ ಟೈ ಆಗಿದೆ. ದಿನದ ಮೊದಲ ಪಂದ್ಯದಲ್ಲೂ ಪಾಟ್ನಾ ಪೈರೇಟ್ಸ್ ಹಾಗೂ ಪುಣೇರಿ ಪಲ್ಟನ್ ತಂಡಗಳು ಸಮಬಲ ಸಾಧಿಸಿದ್ದವು.
ತಮಿಳು ತಲೈವಾಸ್ ತಂಡ ನಾಯಕ ಪವನ್ ಶೆರಾವತ್ ಅವರ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ನೀಡಿತು. ಯುವ ಆಟಗಾರರು ಕೊನೆಯ ಕ್ಷಣದವರೆಗೂ ಸೋಲನ್ನು ಒಪ್ಪಿಕೊಳ್ಳದೆ ಸಮಬಲ ಸಾಧಿಸಿದರು.
ಗುಜರಾತ್ ಜಯಂಟ್ಸ್ ಪರ ರಾಕೇಶ್ ರೈಡಿಂಗ್ನಲ್ಲಿ 13 ಅಂಕಗಳನ್ನು ಗಳಿಸಿ ತಂಡದ ಯಶಸ್ಸಿಗೆ ನೆರವಾದರು, ನಾಯಕ ಚಂದ್ರನ್ ರಂಜಿತ್ ಜವಾಬ್ದಾರಿಯುತ ಆಟ ಗುಜರಾತ್ ಜಯಂಟ್ಸ್ ತಂಡವನ್ನು ಸೋಲಿನಿಂದ ಪಾರು ಮಾಡಿದರು. ತಮಿಳು ತಲೈವಾಸ್ನ ನರೇಂದರ್ 10 ಅಂಕಗಳನ್ನು ಗಳಿಸಿ ಸಮಬಲದ ಸಾಧನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ತಲೈವಾಸ್ ತಂಡ ಒಂದು ಹಂತದಲ್ಲಿ ಮುನ್ನಡೆ ಕಂಡುಕೊಂಡಿತ್ತು. ಆದರೆ ಎದುರಾಳಿಯ ರೈಡಿಂಗ್ನಲ್ಲಿ ನಿರಂತರ ಅಂಕಗಳನ್ನು ನೀಡಿ ಜಯದ ಅವಕಾಶವನ್ನು ಕಳೆದುಕೊಂಡಿತು.
![Pro Kabaddi: ಎರಡನೇ ದಿನ ಎರಡನೇ ಪಂದ್ಯವೂ ಟೈ 3 ProKabaddi 4](http://sportskarnataka.com/wp-content/uploads/2022/10/ProKabaddi-4-1024x1024.jpg)
ಚೊಚ್ಚಲ ಪ್ರೊ ಕಬಡ್ಡಿ ಲೀಗ್ ಆಡುತ್ತಿರುವ ನರೇಂದರ್ ರೈಡಿಂಗ್ನಲ್ಲಿ ಸೂಪರ್ 10 ಸಾಧನೆ ಮಾಡಿ ತಂಡಕ್ಕೆ ನೆರವಾದರು, ಗುಜರಾತ್ ಜಯಂಟ್ಸ್ ತಂಡದ ರಾಕೇಶ್ ಕೂಡ ಸೂಪರ್ 10 ಸಾಧನೆ ಮಾಡಿದರು.
ಶೆರಾವತ್ ಗಾಯ, ತಲೈವಾಸ್ಗೆ ಆರಂಭಿಕ ಹಿನ್ನಡೆ: ಪ್ರಸಕ್ತ ಲೀಗ್ನಲ್ಲಿ ಅತ್ಯಂತ ದುಬಾರಿ ಆಟಗಾರ ತಮಿಳು ತಲೈವಾಸ್ ತಂಡದ ನಾಯಕ ಪವನ್ ಶೆರಾವತ್ ಗಾಯಗೊಂಡು ಅಂಗಣದಿಂದ ಹೊರನಡೆದ ಕಾರಣ ಗುಜರಾತ್ ಜಯಂಟ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ ತಮಿಳು ತಲೈವಾಸ್ 16-18 ಅಂತರದಲ್ಲಿ ಹಿನ್ನಡೆ ಕಂಡಿತು. ನಾಯಕನ ಅನುಪಸ್ಥಿತಿಯಲ್ಲೂ ತಮಿಳು ತಂಡ ಉತ್ತಮ ಹೋರಾಟ ನೀಡಿತು.
![Pro Kabaddi: ಎರಡನೇ ದಿನ ಎರಡನೇ ಪಂದ್ಯವೂ ಟೈ 4 ProKabaddi 3](http://sportskarnataka.com/wp-content/uploads/2022/10/ProKabaddi-3-1024x576.jpg)
ಶೆರಾವತ್ ಅನುಪಸ್ಥಿತಿಯಲ್ಲಿ ಗುಜರಾತ್ ತಂಡದ ನಾಯಕ ಚಂದ್ರನ್ ರಂಜಿತ್ (5) ಹಾಗೂ ರಾಕೇಶ್ (8) ಉತ್ತಮ ರೀತಿಯಲ್ಲಿ ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು.
Pro Kabaddi, Gujarat Giants, Tamil Thalaivas, Tie