ಪಾರ್ತಿಕ್ ದಾಹೀಯಾ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡ ಪುಣೇರಿ ಪಲ್ಟಾನ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಸತತ 5 ಪಂದ್ಯ ಗೆಲುವಿನ ಪುಣೇರಿ ತಂಡದ ಓಟಕ್ಕೆ ಬ್ರೇಕ್ ಬಿದ್ದಿದೆ.
ಇಲ್ಲಿನ ಗಾಚಿ ಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪುಣೇರಿ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 51-39 ಅಂಕಗಳಿಂದ ಗೆದ್ದುಕೊಂಡಿತು. ಮೊದಲ ಅವಯಲ್ಲಿ ಪುಣೇರಿ ಪಲ್ಟಾನ್ 22-21 ಅಂಕಗಳಿಂದ ಮುನ್ನಡೆ ಪಡೆದಿತ್ತು.
ಜೈಂಟ್ಸ್ ಪರ ಆಲ್ರೌಂಡರ್ ಪಾರ್ತಿಕ್ ದಾಹೀಯಾ 19 ಅಂಕ ಸಂಪಾದಿಸಿದರು. ಪುಣೇರಿ ಪರ ಆಕಾಶ್ ಶಿಂದೆ 9, ಅಸ್ಲಾಮ್ ಇನಾಂದರ್ 6, ಪಂಕಜ್ ಮೋಹಿತೆ 7 ತಂದುಕೊಟ್ಟರು.
ಮತ್ತೊಂದು ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡ ಯೂ ಮುಂಬಾ ವಿರುದ್ಧ 35-33 ಅಂಕಗಳಿಂದ ಗೆದ್ದುಕೊಂಡಿತು. ಹರ್ಯಾಣ ಪರ ರೈಡರ್‍ಗಳಾದ ಮಂಜೀತ್ 7, ರಾಕೇಶ್ ನರ್ವಾಲ್ 6 ಅಂಕ ಸಂಪಾದಿಸಿದರು.
ಯೂ ಮುಂಬಾ ಪರ ಆಶೀಶ್ ಹಾಗೂ ಜೈ ಭಗವಾನ್ ತಲಾ 6 ಅಂಕ ತಂದುಕೊಟ್ಟರು.