ಬೆಂಗಳೂರಿನಲ್ಲಿ ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ದೆಹಲಿ ದಬಾಂಗ್ ತಂಡ 41-30 ರಿಂದ ಪುಣೇರಿ ಪಲ್ಟನ್ ತಂಡವನ್ನು ಪ್ರೋ ಕಬಡ್ಡಿ ಟೂರ್ನಿಯಲ್ಲಿ ಮಣಿಸಿತು.
ಮೊದಲಾವಧಿಯಲ್ಲಿ ದಬಾಂಗ್ ತಂಡ ಭರ್ಜರಿ ಮುನ್ನಡೆ ಸಾಧಿಸಿತ್ತು. ಈ ಅವಧಿಯಲ್ಲಿ ದೆಹಲಿ 22-15 ರಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಈ ಅವಧಿಯಲ್ಲಿ ದೆಹಲಿ ತಂಡ ದಾಳಿಯಲ್ಲಿ 13, ಟ್ಯಾಕಲ್ ಮಾಡುವ ಮೂಲಕ 5 ಅಂಕಗಳನ್ನು ಕಲೆ ಹಾಕಿತು. ಎರಡನೇ ಅವಧಿಯಲ್ಲೂ ದೆಹಲಿ ಸ್ಥಿರ ಪ್ರದರ್ಶನ ನೀಡಿ ಅಂಕಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿತು.
ವಿಜೇತ ತಂಡದ ಪರ ನವೀನ್ ಕುಮಾರ್ ಮಿಂಚಿನ ಆಟವನ್ನು ಪ್ರದರ್ಶಿಸಿದರು. ಇವರು ಒಟ್ಟಾರೆ 24 ಬಾರಿ ದಾಳಿ ನಡೆಸಿ 16 ಅಂಕಗಳನ್ನು ಸೇರಿಸಿದರು. ಆಲ್ ರೌಂಡರ್ ವಿಜಯ್ ರೈಡ್ ಮೂಲಕ 9 ಅಂಕ ಕಲೆ ಹಾಕಿದ್ದಾರೆ.
ಪುಣೇರಿ ತಂಡದ ಪರ ನಿತೀನ್ ತೋಮರ್ ಬಾರಿ ದಾಳಿ ನಡೆಸಿ ಏಳು ಅಂಕ ಬಾಚಿಕೊಂಡರು. ಉಳಿದಂತೆ ರಾಹುಲ್ ಚೌಧರಿ, ಪಂಕಜ್ ಮೋಹಿತ್ ಸೋಲಿನಲ್ಲಿ ಮಿಂಚಿದರು.