ಪ್ರೊ ಕಬಡ್ಡಿ 9ನೇ ಆವೃತ್ತಿಯ ಸೆಮಿಫೈನಲ್ ಪಂದ್ಯಗಳು ಇಂದು ನಡೆಯಲಿದೆ.
ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ಗೆ ತಂಡಗಳು ಅಂತಿಮವಾಗಿವೆ. ಮೊದಲ ಸೆಮಿಫೈನಲ್ನಲ್ಲಿ ಬೆಂಗಳೂರು ಬುಲ್ಸ್ ಬಲಿಷ್ಠ ಜೈಪುರ ತಂಡವನ್ನು ಎದುರಿಸಲಿದೆ.
2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ಟೂರ್ನಿಯಲ್ಲಿ ಮೂರನೆ ತಂಡವಾಗಿ ಪ್ಲೇಆಫ್ ಪ್ರವೇಶಿಸಿತ್ತು.ಪ್ಲೇ ಆಫ್ನಲ್ಲಿ ಡೆಲ್ಲಿ ವಿರುದ್ಧ 56-24 ಅಂಕಗಳಿಂದ ಗೆದ್ದುಕೊಂಡಿತು. ಇದೀಗ ಜೈಪುರ ತಂಡವನ್ನು ಸೋಲಿಸಿ ಮೂರನೆ ಬಾರಿಗೆ ಫೈನಲ್ ಪ್ರವೇಶಿಸಲು ಸಜ್ಜಾಗಿದೆ.
ಆದರೆ ಗುಂಪು ಹಂತದಲ್ಲಿ ಮೊದಲ ಸ್ಥಾನ ಪಡೆದು ನೇರ ಪ್ರವೇಶ ಪಡೆದ ಜೈಪುರ ತಂಡದಿಂದ ಬೆಂಗಳೂರು ತಂಡ ಕಠಿಣ ಸವಾಲನ್ನು ಎದುರಿಸಲಿದೆ.
ಇನ್ನು ಎರಡನೆ ಸೆಮಿಫೈನಲ್ನಲ್ಲಿ ಬಲಿಷ್ಠ ಪುಣೇರಿ ತಂಡವನ್ನು ತಮಿಳ್ ತಲೈವಾಸ್ ತಂಡವನ್ನು ಎದುರಿಸಲಿದೆ. ಗುಂಪು ಹಂತದಲ್ಲಿ ಎರಡನೆ ಸ್ಥಾನ ಪಡೆದು ಸೆಮಿಫೈನಲ್ಗೆ ಪುಣೇರಿ ತಂಡ ನೇರ ಪ್ರವೇಶ ಪಡೆದಿತ್ತು.
ತಲೈವಾಸ್ ತಂಡ 2ನೇ ಎಲಿಮಿನೇಟರ್ನಲ್ಲಿ ಯುಪಿ ಯೋಧಾಸ್ ವಿರುದ್ಧ ರೋಚಕವಾಗಿ ಟೈಬ್ರೇಕರ್ನಲ್ಲಿ ಗೆದ್ದು ಸೆಮಿಫೈನಲ್ ಪ್ರವೇಶಿಸಿತ್ತು.ಇದೀಗ ಪುಣೆ ಮತ್ತು ತಲೈವಾಸ್ ತಂಡ ಚೊಚ್ಚಲ ಫೈನಲ್ ಮೇಲೆ ಕಣ್ಣಿಟ್ಟಿದೆ.