ಒಂಭತ್ತನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡದ ಗೆಲುವಿನ ಯಾತ್ರೆ ಮುಂದುವರೆದಿದೆ.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಜೈಂಟ್ಸ್ ವಿರುದ್ಧ 45-38 ಅಂಕಗಳಿಂದ ಮಣಿಸಿತು.ಅಂಕಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು.
ಬುಲ್ಸ್ ಪರ ಭರ್ಜರಿ ರೈಡಿಂಗ್ ಮಾಡಿದ ಭರತ್ 18 ಅಂಕ, ರೈಡರ್ ವಿಖಾಶ್ ಕಾಂಡಾಲಾ 5 ಅಂಕ ಸಂಪಾದಿಸಿದರು.ಬುಲ್ಸ್ ಮೊದಲಾರ್ಧಧಲ್ಲಿ ಗುಜರಾತ್ ತಂಡವನ್ನು 2 ಬಾರಿ ಆಲೌಟ್ ಮಾಡಿತು. ಐದರಿಂದ ಆರು ಅಂಕಗಳ ಮುನ್ನಡೆ ಕಾಯ್ದುಕೊಂಡು ಜಯಿಸಿತು.
ಗುಜರಾತ್ ಪರ ಚಂದ್ರನ್ ರಂಜೀತ್ ರೈಡಿಂಗ್ನಲ್ಲಿ 12 ಅಂಕ ತಂದುಕೊಟ್ಟರು. ಆಲ್ರೌಂಡರ್ ಪ್ರತೀಕ್ ದಾಹಿಯಾ 10 ಅಂಕ ಪಡೆದರು.
ಬುಲ್ಸ್ ಈ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 10ರಲ್ಲಿ ಗೆಲುವು ದಾಖಲಿಸಿ 56 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 54 ಅಂಕ ಪಡೆದ ಪುಣೇರಿ ಪಲ್ಟಾನ್ ಎರಡೆನೆ ಸ್ಥಾನದಲ್ಲಿದೆ.