ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಮತ್ತೆ ವೀರೋಚಿತ ಸೋಲು ಅನುಭವಿಸಿದೆ. ಸತತ ಎರಡನೆ ಸೋಲು ಅನುಭವಿಸಿದೆ.
ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಬೆಂಗಾಲ್ ವಾರಿಯರ್ಸ್ ವಿರುದ್ಧ 38-41 ಅಂಕಗಳಿಂದ ಶರಣಾಯಿತು.
ಮೊದಲಾರ್ಧದಲ್ಲಿ ಬುಲ್ಸ್ 22- 18 ಅಂಕಗಳಿಂದ ಮುನ್ನಡೆ ಪಡೆದಿತ್ತು. ಎದುರಾಳಿ ತಂಡವನ್ನ 2 ಬಾರಿ ಆಲೌಟ್ ಮಾಡಿತ್ತು. ಎರಡನೆ ಅವಧಿಯಲ್ಲಿ ಬೆಂಗಾಲ್ ಟ್ಯಾಕ್ಲಿಂಗ್‍ನಲ್ಲಿ ಮಿಂಚಿತು.
ಬೆಂಗಾಲ್ ಪರ ರೈಡರ್‍ಗಳಾದ ಮಣಿಂದರ್ ಸಿಂಗ್ 12,ಶ್ರೀಕಾಂತ್ ಜಾಧವ್ 9, ಡಿಫೆಂಡರ್ ಗಿರೀಶ್ ಮಾರುತಿ 6 ಅಂಕ ಪಡೆದರು.
ಬುಲ್ಸ್ ಪರ ರೈಡರ್‍ಗಳಾದ ಭರತ್ 10, ವಿಕಾಶ್ ಕಾಂಡೊಲಾ 5 ಅಂಕ ಸಂಪಾದಿಸಿದರು.
ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 39-32 ಅಂಕಗಳಿಂದ ಸೋಲಿಸಿತು.
ಮಂಗಳವಾರದ ಪಂದ್ಯದಲ್ಲಿ ಪಾಟ್ನ ತಂಡ ತೆಲುಗು ಟೈಟಾನ್ಸ್ ವಿರುದ್ಧ 36-35 ಅಂಕಗಳಿಂದ ಸೋಲಿಸಿತು. ತಮಿಳ್ ತಲೈವಾಸ್ ತಂಡ ಯೂ ಮುಂಬಾ ವಿರುದ್ಧ 34-20 ಅಂಕಗಳಿಂದ ಗೆಲುವು ಪಡೆಯಿತು.