ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿರುವ ಪಂಜಾಬ್ ತಂಡ ಇಂದು ಡು ಆರ್ ಡೈ ಮ್ಯಾಚ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಧರ್ಮಾಶಾಲಾದಲ್ಲಿ ನಡೆಯಲಿರುವ ಪಂದ್ಯ ಪಂಜಾಬ್ಗೆ ಬಹಳ ಮಹತ್ವದ್ದಾಗಿದ್ದು ಪ್ಲೇ ಆಫ್ ರೇಸ್ ನಲ್ಲಿ ಉಳಿಯಬೇಕಿದ್ದಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಬೇಕಿದೆ.
ಪಂಜಾಬ್ ಇನ್ನುಳಿದ 2 ಪಂದ್ಯಗಳನ್ನು ಗೆದ್ದರೆ 16 ಅಂಕ ಪಡೆಯಲಿದೆಯಾದರೂ ನೆಟ್ ರನ್ ರೇಟ್ ಸುಧಾರಣೆ ಕಾಣಬೇಕಿದ್ದಲ್ಲಿ ದೊಡ್ಡ ಗೆಲುವುಗಳು ಅಗತ್ಯವಾಗಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದಿದ್ದು ಅಂಕಪ್ಟಿಯಲ್ಲಿ ಕೊನೆಯ ಸ್ಥಾನದಿಂದ ಹೊರ ಬರಲು ವಾರ್ನರ್ ಪಡೆ ಹೋರಾಟ ನಡೆಸಲಿದೆ.
ಧರ್ಮಾ ಶಾಲಾ ಪಿಚ್ ವೇಗಿಗಳಿಗೆ ನೆರವು ನೀಡಲಿದೆ. ಈ ಹಿಂದೆ ಸೀಮಿತ ಓವರ್ಗಳ ಸರಣಿಗಳು ದೊಡ್ಡ ಮೊತ್ತಕ್ಕೆ ಸಾಕ್ಷಿಯಾಗಿದ್ದವು. ಮೊದಲ ಇನ್ನಿಂಗ್ಸ್ನಲ್ಲಿ ಹೆಚ್ಚೆಂದರೆ 160 ರನ್ ಬರಲಿದೆ.ಎರಡನೆ ಇನ್ನಿಂಗ್ಸ್ ಬ್ಯಾಟಿಂಗ್ ಮಾಡುವ ಸೋಲುವುದೇ ಹೆಚ್ಚು. ಆದರೆ ಈ ಹಿಂದೆ ನಡೆದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ತಂಡ ಚೇಸ್ ಮಾಡಿ ಗೆದ್ದಿತ್ತು.