IPL 2022 ರ ಮೊದಲ ಎಲಿಮಿನೇಟರ್‌ನಲ್ಲಿ, ಇಂದೋರ್‌ನ ರಜತ್ ಪಾಟೀದಾರ್ ಲಕ್ನೋ ವಿರುದ್ಧ ಬೆಂಕಿಯೊಂದಿಗೆ ಭರ್ಜರಿ ಬ್ಯಾಟ್ ಮಾಡಿದರು. ಅವರು ಕೇವಲ 54 ಎಸೆತಗಳಲ್ಲಿ 112 ರನ್ ಗಳಿಸಿದರು.
ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ IPL 2022 ರ ಮೊದಲ ಎಲಿಮಿನೇಟರ್‌ನಲ್ಲಿ, ಟಾಸ್ ಲಕ್ನೋ ಪರವಾಗಾಯಿತು. ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕುವಲ್ಲಿ ಸೋತರು. ಇಂತಹ ಪರಿಸ್ಥಿತಿಯಲ್ಲಿ ಇಡೀ ಇನಿಂಗ್ಸ್ ನ ಜವಾಬ್ದಾರಿಯನ್ನು ರಜತ್ ವಹಿಸಿಕೊಂಡರು.
ನಾಯಕ ಫಾಫ್ ಅವರ ಆರಂಭಿಕ ಪತನದ ನಂತರ, ರಜತ್ ಫಸ್ಟ್ ಡೌನ್ ಬ್ಯಾಟ್ಸ್‌ಮನ್ ಆಗಿ ಮೈದಾನಕ್ಕೆ ಕಾಲಿಟ್ಟರು. ಮೊದಲಿಗೆ, ವಿರಾಟ್ ಕೊಹ್ಲಿಯೊಂದಿಗೆ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಮತ್ತು ನಂತರ ಅವರು 28 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಾಯದಿಂದ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ನಂತರ ವಿರಾಟ್ ರನ್ ವೇಗಗೊಳಿಸಲು ಪ್ರಯತ್ನಿಸಲು ಹೋಗಿ ಔಟ್ ಆದರು.
ಇಲ್ಲಿಂದ ತಂಡದ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೀಗಿರುವಾಗ ರಜತ್ ಪಾಟೀದಾರ್ ಬೆಂಗಳೂರಿನ ಪಾಳಯದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದರು.
ರಜತ್ ಪ್ಲೇಆಫ್‌ನಲ್ಲಿ ತಂಡದ ಪರ ಸ್ಮರಣೀಯ ಇನ್ನಿಂಗ್ಸ್ ಆಡಿದರು. ಇದು ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಕಷ್ಟಕಾಲದಲ್ಲಿ ತಂಡಕ್ಕೆ ರಜತ್ ಆಧಾರವಾದರು. ಪಾಟೀದಾರ್ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ ಶತಕ ಪೂರೈಸಿ, ಕೊನೆಯವರೆಗೂ ಅಜೇಯರಾಗಿ ಉಳಿದ ರಜತ್ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು.
ಪವರ್ ಪ್ಲೇನ ಮೊದಲ ಓವರ್‌ನಲ್ಲಿ ಕೃನಾಲ್ ರನ್ ನೀಡಿ ಕೈ ಸುಟ್ಟುಕೊಂಡರು. ಪವರ್ ಪ್ಲೇನ ಕೊನೆಯ ಓವರ್‌ನಲ್ಲಿ ಕೃನಾಲ್ 20 ರನ್ ಬಿಟ್ಟುಕೊಟ್ಟರು. ಓವರ್‌ನ ಮೊದಲ ಬಾಲ್‌ನಲ್ಲಿ ಕೊಹ್ಲಿ ಸಿಂಗಲ್ ತೆಗೆದುಕೊಂಡು ಪಾಟೀದಾರ್‌ಗೆ ಸ್ಟ್ರೈಕ್ ನೀಡಿದರು, ಈ ಓವರ್ ಪಾಂಡ್ಯಗೆ ದುಃಸ್ವಪ್ನವಾಯಿತು.
ಪಾಟೀದಾರ್ ಓವರ್‌ನ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಆ ನಂತರ ನಾಲ್ಕನೇ ಎಸೆತದಲ್ಲಿ ದೊಡ್ಡ ಸಿಕ್ಸರ್ ಮತ್ತು ಐದನೇ ಎಸೆತದಲ್ಲಿ ಬೌಂಡರಿ. ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಪಾಟೀದಾರ್ ಸ್ಟ್ರೈಕ್ ಉಳಿಸಿಕೊಂಡರು.
ಪಾಟೀದಾರ್ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ರವಿ ಬಿಷ್ಣೋಯ್ ವಿರುದ್ಧ ಅಬ್ಬರಿಸಿದರು. ಬಿಷ್ಣೋಯ್ ಅವರ ನಾಲ್ಕನೇ ಓವರ್‌ನಲ್ಲಿ ಪಾಟೀದಾರ್ 26 ರನ್ ಸಿಡಿಸಿದರು.