ಆತಿಥೇಯ ಪಾಕಿಸ್ತಾನ ವನಿತೆಯರ ಕ್ರಿಕೆಟ್ ತಂಡ ಐರ್ಲೆಂಡ್ ವನಿತೆಯರ ವಿರುದ್ಧ 6 ವಿಕೆಟ್ಗಳಿಂದ ಸೋತು ಆಘಾತ ಅನುಭವಿಸಿದೆ.
ಲಾಹೋರ್ನ ಗಡಾಫಿ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ನಿಗದತಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 135 ರನ್ ಕಲೆ ಹಾಕಿತು. ಐರ್ಲೆಂಡ್ ತಂಡ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿತು.
ಐರ್ಲೆಂಡ್ ತಂಡದ ಪರ ಗಾಬಿ ಲಿವೀಸ್ 69, ಒರ್ಲಾ ಪ್ರೆಂಡ್ರಗಾಸ್ಟ್ 39,ಲಾರಾ ಡಿಲಾನಿ 3 ರನ್ ಗಳಿಸಿದರು. ಎಲಿಮಾರ್ ರಿಚರ್ಡ್ಸನ್ 16 ರನ್ ಗಳಿಸಿದರು.

ನಿದಾ ಧಾರ್,ಸಂಧು ಹಾಗೂ ಫಾತೀಮಾ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಪಾಕ್ ಪರ ನಿಧಾ ಧಾರ್ 61 ರನ್, ಅಲಿಯಾ ರಿಯಾಜ್ ಅಜೇಯ 24 ರನ್, ಬಿಸ್ಮಾ ಮಾರೂಫ್ 17 ರನ್ ಗಳಿಸಿದರು.