ಆರಂಭಿಕರು ಅಬ್ಬರಿಸಲಿಲ್ಲ: ಪಾಕ್ ಸೋಲಿಗೆ ಮೊದಲನೇ ಕಾರಣವೇ ಉತ್ತಮ ಓಪನಿಂಗ್ ಸಿಗದೇ ಇರುವುದು. ಸೆಮಿಫೈನಲ್ ಪಂದ್ಯವಲ್ಲಿ ಶತಕದ ಜೊತಯತವಾಡಿದ್ದ ರಿಜ್ವಾನ್ ಹಾಗೂ ಬಾಬರ್, ಫೈನಲ್ ಪಂದ್ಯದಲ್ಲಿ ವಿಫಲವಾಯಿತು. ಇಬ್ಬರು 26 ಎಸೆತಗಳಲ್ಲಿ 29 ರನ್ ಜೊತೆಯಾಟ ಮಾತ್ರ ಆಡಿದರು. 15 ರನ್ ಗಳಿಸಿ ರಿಜ್ವಾನ್ ಔಟಾಗುವ ಮೂಲಕ ಆರಂಭಿಕ ಜೊತೆಯಾಟಕ್ಕೆ ಕೊನೆ ಹಾಡಿದರು. ನಂತರ ನಾಯಕ ಬಾಬರ್, ಕೂಡ 32 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೊಹಮ್ಮದ್ ಹ್ಯಾರಿಸ್ ಆಟ 8 ರನ್ನಿಗೆ ಅಂತ್ಯವಾಯಿತು.
48 ಡಾಟ್ ಬಾಲ್: ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ. ಇಂದು ಬ್ಯಾಟರ್ಸ್ ಬರೋಬ್ಬರಿ 48 ಡಾಟ್ ಬಾಲ್ಗಳನ್ನು ಮಾಡಿದೆ. ಟಿ೨೦ಯಲ್ಲಿ ಪ್ರತಿಯೊಂದು ಎಸೆತವೂ ಮುಖ್ಯ. ಆದರೆ, ಪಾಕ್ 48 ಎಸೆತಗಳಲ್ಲಿ ವೇಸ್ಟ್ ಮಾಡಿತು. ಇದು ತಂಡಕ್ಕೆ ದೊಡ್ಡ ಪೆಟ್ಟು ನೀಡಿತು. ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಹ್ಯಾರಿಸ್ ಸಾಕಷ್ಟು ಡಾಟ್ ಬಾಲ್ ಆಡಿದರು. ಇದರಿಂದಾಗಿ ಸ್ಕೋರ್ ಕೂಡ ಕೇವಲ 138 ರನ್‌ಗಳಿಗೆ ಸೀಮಿತವಾಯಿತು.
ಶಾಹೀನ್ ಅಫ್ರಿದಿಗೆ ಗಾಯ: ವಿಶ್ವದಲ್ಲೇ ಅತ್ಯುತ್ತಮ ಬೌಲರ್ ಆಗಿರುವ ಶಾಹಿನ್ ಅಫ್ರಿದಿ ಗಾಯದೊಂಡಿದ್ದು, ಪಾಕ್ ಸೋಲಿಗೆ ಮತ್ತೊಂದು ಕಾರಣ. ಹ್ಯಾರಿ ಬ್ರೂಕ್ ಕ್ಯಾಚ್ ಹಿಡಿಯುವ ವೇಳೆ ಶಾಹೀನ್ ಗಾಯಗೊಂಡರು. ಹೀಗಾಗಿ, 2.1 ಓವರ್‌ಗಳನ್ನು ಮಾತ್ರ ಬೌಲ್ ಮಾಡಿದರು. ನಂತರ ಐದು ಎಸೆತ ಎಸೆದ ಇಫ್ತಿಕಾರ್ 13 ರನ್ ಬಿಟ್ಟುಕೊಟ್ಟರು.
ಇಂಗ್ಲೆಂಡ್ ಮಾರಕ ಬೌಲಿಂಗ್: ಪಾಕ್ ತಂಡದ ಸೋಲಿಗೆ ಮತ್ತೊಂದು ಕಾರಣವೇ ಆಂಗ್ಲರ ಮಾರಕ ಬೌಲಿಂಗ್. ಸ್ಯಾಮ್ ಕರನ್ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಪಡೆದರೆ, 15 ಬಾಲ್ಗಳನ್ನು ಡಾಟ್ ಮಾಡಿದರು. ಹಾಗೆಯೇ ಆದಿಲ್ ರಶೀದ್ 4 ಓವರ್ಗಳಲ್ಲಿ 22 ರನ್ ನೀಡಿ 2 ವಿಕೆಟ್ ಪಡೆದರು. ಕೊನೆಯಲ್ಲಿ ಕ್ರಿಸ್ ಜೋರ್ಡನ್ ಕೂಡ ಎರಡು ವಿಕೆಟ್ ಪಡೆದು, ಪಾಕ್ ತಂಡಕ್ಕೆ ಆಘಾತ ನೀಡಿದರು.