Virat Kohli – ಮೇಲೆ ಪಾಕ್ ಕ್ರಿಕೆಟಿಗರಿಗೆ ಯಾಕಿಷ್ಟು ಪ್ರೀತಿ ?

ವಿರಾಟ್ ಕೊಹ್ಲಿಯವರ ಕಳಪೆ ಫಾರ್ಮ್ ಬಗ್ಗೆ ಕಪಿಲ್ ದೇವ್ ಸೇರಿದಂತೆ ಕೆಲವು ಭಾರತದ ಮಾಜಿ ಆಟಗಾರರು ಟೀಕೆ ಮಾಡಿದ್ದಾರೆ. ವಿರಾಟ್ ಅವರನ್ನು ಟಿ-20 ತಂಡದಿಂದ ಕೈಬಿಡಬೇಕು ಎಂಬ ಮಾತುಗಳು ಕೇಳಿಬಂದಿವೆ.
ಅಚ್ಚರಿಯಂದ್ರೆ ವಿರಾಟ್ ವಿದೇಶಿ ಆಟಗಾರರು ಬೆಂಬಲ ನೀಡಿದ್ದಾರೆ. ಅದರಲ್ಲೂ ಪಾಕಿಸ್ತಾನದ ಆಟಗಾರರು ಕೂಡ ಸಪೋರ್ಟ್ ಮಾಡಿದ್ದಾರೆ. ಬಾಬರ್ ಅಝಮ್ ಟ್ವಿಟ್ ಮಾಡಿದ ಬಳಿಕ ಇದೀಗ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯಿಬ್ ಅಖ್ತರ್ ಕೂಡ ವಿರಾಟ್ ಬೆನ್ನಿಗೆ ನಿಂತಿದ್ದಾರೆ. ಅಲ್ಲದೆ ಟೀಕೆ ಮಾಡಿದವರಿಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಒಬ್ಬ ಪಾಕಿಸ್ತಾನಿ. ನಾನು ಯಾಕೆ ವಿರಾಟ್ ಕೊಹ್ಲಿಯವರನ್ನು ಬೆಂಬಲಿಸಬೇಕು. ಯಾಕಂದ್ರೆ ವಿರಾಟ್ ಗ್ರೇಟ್ ಪ್ಲೇಯರ್. 70 ಅಂತಾರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದಾರೆ. ಇದೆಲ್ಲಾ ಆಂಟಿ ಮನೆಯಿಂದ ಬಂದಿರುವುದಲ್ಲ. ಅಥವಾ ಕ್ಯಾಂಡಿ ಕ್ರಶ್ ಆಡಿ ಬಂದಿಲ್ಲ ಎಂದು ಹೇಳಿದ್ದಾರೆ.
ಇನ್ನು ಕಪಿಲ್ ದೇವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶೋಯಿಬ್ ಅಖ್ತರ್, ಕಪಿಲ್ ದೇವ್ ನನಗೆ ಹಿರಿಯರು. ಅವರು ಅಭಿಪ್ರಾಯ ವ್ಯಕ್ತಪಡಿಸಿರುವುದು ಸರಿ. ಅವರಿಗೆ ಹಕ್ಕಿದೆ. ಆದ್ರೆ ಕಪಿಲ್ ದೇವ್ ಹೇಳಿದ ಮೇಲೆ ಆತ ಶ್ರೇಷ್ಠ ಕ್ರಿಕೆಟಿಗ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಅಲ್ಲದೆ ಅವರಿಗೆ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಕೂಡ ಇದೆ ಎಂದು ಹೇಳಿದ್ದಾರೆ ಅಖ್ತರ್.

ಇನ್ನು ವಿರಾಟ್ ಕೊಹ್ಲಿ ಆಟ ಮುಗಿಯಿತ್ತಾ ? ಸರಿ ಒಪ್ಪಿಕೊಳ್ಳೋಣ. ಹಾಗೇ ವಿರಾಟ್ ಕೊಹ್ಲಿಯವರನ್ನು ತಂಡದಿಂದ ಕೈಬಿಡಬೇಕಾ ? ಅದು ಕೂಡ ಸರಿನೇ. ಆದ್ರೆ ಈ ವಿಚಾರಗಳನ್ನು ನಾನು ಕೇಳಿದಾಗ ನನಗೆ ನಗು ಬರುತ್ತದೆ. ಯಾಕಂದ್ರೆ ವಿರಾಟ್ ಕೊಹ್ಲಿ ಕಳೆದ ಹತ್ತು ವರ್ಷಗಳಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮೆನ್ ಆಗಿ ಹೊರಹೊಮ್ಮಿದ್ದಾರೆ ಎಂಬುದನ್ನು ಮರೆಯಬಾರದು ಅಂತಾರೆ ಶೋಯಿಬ್ ಅಖ್ತರ್.
ಹೌದು, ಕಳೆದ ಒಂದೆರೆಡು ವರ್ಷಗಳಿಂದ ವಿರಾಟ್ ಶತಕ ದಾಖಲಿಸಿಲ್ಲ. ಆದ್ರೆ ರನ್ ಗಳಿಸಿದ್ದಾರೆ. ಆದ್ರೆ ಈಗ ಎಲ್ಲರು ಅವರ ವಿರುದ್ಧ ಟೀಕೆ ಮಾಡುವುದು ಸರಿಯಲ್ಲ. ವಿರಾಟ್ ಅದ್ಭುತ ವ್ಯಕ್ತಿ ಮತ್ತು ಗ್ರೇಟ್ ಪ್ಲೇಯರ್ ಎಂದು ಶೋಯಿಬ್ ಅಖ್ತರ್ ಬಣ್ಣಿಸಿದ್ದಾರೆ.

ಇದೇ ವೇಳೆ ಶೋಯಿಬ್ ಅಖ್ತರ್ ಅವರು ವಿರಾಟ್ ಕೊಹ್ಲಿಗೆ ಸಲಹೆ ಕೂಡ ನೀಡಿದ್ದಾರೆ. ನಾನು ನಾಯಕನಾಗಿದ್ದೇ ಎಂಬುದನ್ನು ಮರೆತುಬಿಡಬೇಕು. ಆಟದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಹಾಗೇ ರನ್ ಗಳಿಸುವತ್ತ ತಲೆಕೆಡಿಸಿಕೊಳ್ಳಬಾರದು. ಕನಿಷ್ಠ ನೂರು ಎಸೆತಗಳನ್ನು ಆಡಲೇಬೇಕು ಎಂಬ ಚಿತ್ತವನ್ನಿಟ್ಟುಕೊಳ್ಳಬೇಕು. ಆಗ ರನ್ ಗಳು ತನ್ನಿಂದ ತಾನೇ ಬರುತ್ತವೆ ಎಂದು ಹೇಳ್ತಾರೆ ಶೋಯಿಬ್ ಅಖ್ತರ್.
ನಾನು ವಿರಾಟ್ ಕೊಹ್ಲಿಯವರಿಂದ 110 ಶತಕಗಳು ಬರುತ್ತವೆ ಎಂದು ಹೇಳಿದ್ದೆ. ಅವರು ಒಂದು ಬಾರಿ ಫಾರ್ಮ್ ಗೆ ಬಂದ್ರೆ ಖಂಡಿತವಾಗಿಯೂ 30 ಶತಕಗಳನ್ನು ಸಿಡಿಸುತ್ತಾರೆ. ಮುಂದಿನ ದಿನಗಳಲ್ಲಿ ಭಾರತದ ಸೂಪರ್ ಸ್ಟಾರ್ ಅದ್ಭುತವಾದ ಪ್ರದರ್ಶನವನ್ನು ನೀಡ್ತಾರೆ ಅನ್ನೋ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಮಲ್ಲಿಕ್.