ಎರಡನೇ ಬಾರಿ ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಸಿಂಧೂ
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧೂ ಅವರು ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಸೂಪರ್ -300 ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಲಕ್ನೋದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಿ.ವಿ. ಸಿಂಧೂ ಅವರು ಮಾಲ್ವಿಕಾ ಬಂಸೋದ್ ಅವರನ್ನು ಸುಲಭವಾಗಿ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡ್ರು.
ಟೂರ್ನಿಯಲ್ಲಿ ಅಗ್ರ ಶ್ರೇಯಾಂಕವನ್ನು ಪಡೆದುಕೊಂಡಿದ್ದ ಸಿಂಧೂ ಅವರು 21-13, 21-16ರಿಂದ ಕೇವಲ 35 ನಿಮಿಷಗಳ ಹೋರಾಟದಲ್ಲಿ ಮಾಲ್ವಿಕಾ ಬಂಸೋದ್ ಅವರನ್ನು ಪರಾಭವಗೊಳಿಸಿದ್ರು.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಹಾಗೂ ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧೂ ಅವರು ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಇದು ಎರಡನೇ ಬಾರಿ ಗೆಲ್ಲುತ್ತಿರುವುದು. ಈ ಹಿಂದೆ 2017ರಲ್ಲಿ ಸಿಂಧು ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು.
Syed Modi International badminton tournament- P.v. Sindhu whips Bansod for Syed Modi crown
ಇನ್ನು ಭಾರತದ ಇಶಾನ್ ಭಟ್ನಾಗರ್ ಮತ್ತು ತನಿಶಾ ಕ್ರಾಸ್ಟೊ ಅವರು ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಫೈನಲ್ ನಲ್ಲಿ ಇಶಾನ್ ಮತ್ತು ತನಿಶಾ ಅವರು ಹೇಮಾ ನಾಗೇಂದ್ರ ಮತ್ತು ಶ್ರೀ ವಿದ್ಯ ಗುರಾಝಾಡಾ ಅವರನ್ನು ಪರಾಭವಗೊಳಸಿದ್ರು.