P.V. Sindhu – ಎಲ್ಲರಿಗೂ ಧನ್ಯವಾದ.. ಬೆಂಬಲ ಪ್ರೀತಿ ಹೀಗೆ ಇರಲಿ

ಪಿ.ವಿ. ಸಿಂಧು ಅವರು ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದು ಸಂತಸದಿಂದ ತೇಲಾಡುತ್ತಿದ್ದಾರೆ. 2022ರಲ್ಲಿ ಮೂರನೇ ಪ್ರಶಸ್ತಿ ಗೆದ್ದಿರುವ ಸಿಂಧು ಅವರು ಮುಂದಿನ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
ಮೊದಲ ಬಾರಿ ಸಿಂಗಾಪುರ ಓಪನ್ ಪ್ರಶಸ್ತಿ ಗೆದ್ದಿರುವ ಪಿ.ವಿ.ಸಿಂಧು ಅವರ ಸಾಧನೆಗೆ ಕ್ರೀಡಾ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಇದೀಗ ಅಭಿನಂದನೆ ಸಲ್ಲಿಸಿದ್ದ ಪ್ರಧಾನಿಗೆ ಪಿ.ವಿ. ಸಿಂಧು ಅವರು ಟ್ವಿಟರ್ ಮೂಲಕ ಧನ್ಯವಾದಗಳು ಸರ್ ಹೇಳಿದ್ದಾರೆ. ಅಲ್ಲದೆ ತನಗೆ ಹಾರೈಸಿದ್ದ ಎಲ್ಲರಿಗೂ ಧನ್ಯವಾದಗಳನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಇನ್ನೊಂದೆಡೆ ಪಿ.ವಿ. ಸಿಂಧು ಅವರು ಟ್ವಿಟರ್ ನಲ್ಲಿ ಭಾವನಾತ್ಮಕ ಸಂದೇಶವನ್ನು ಬರೆದುಕೊಂಡಿದ್ದಾರೆ. ನಿಮ್ಮ ಬೆಂಬಲಕ್ಕೆ ಯಾವ ರೀತಿ ಧನ್ಯವಾದ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಈ ಪ್ರಶಸ್ತಿ ಗೆದ್ದಿರುವುದು ತುಂಬಾನೇ ಖುಷಿ ಕೊಟ್ಟಿದೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸಿಂಧು ಬರೆದುಕೊಂಡಿದ್ದಾರೆ.
ಅಲ್ಲದೆ ತರಬೇತುದಾರ, ಫಿಟ್ನೆಸ್ ಟ್ರೈನರ್ ಮತ್ತು ಫಿಜಿಯೋ ಅವರಿಗೂ ವಿಶೇಷ ಧನ್ಯವಾದ ಗಳು. ಸಿಂಗಾಪುರದಲ್ಲಿ ಗೆಲ್ಲುವುದು ತುಂಬಾನೇ ವಿಶೇಷ. ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ಪಿ.ವಿ. ಸಿಂಧು ತನ್ನ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ನನಗೆ ಒಂದು ದಿನದ ರಜೆ ಇದೆ. ಈ ರಜೆಯನ್ನು ನಾನು ಕುಟುಂಬದ ಜೊತೆ ಕಾಲ ಕಳೆಯಬೇಕು. ರಿಲ್ಯಾಕ್ಸ್ ಆದ ನಂತರ ಕಾಮನ್ ವೆಲ್ತ್ ಗೇಮ್ಸ್ ಗೆ ಸನ್ನದ್ದಗೊಳ್ಳಬೇಕು. ಅಲ್ಲಿ ಪದಕ ಗೆಲ್ಲಲೇಬೇಕು ಎಂದು ಪ್ರಶಸ್ತಿ ಗೆದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಿ.ವಿ. ಸಿಂಧು ಹೇಳಿದ್ದರು.