ವೆಸ್ಟ್ ಇಂಡೀಸ್(West Indies) ತಂಡದ ವಿಕೆಟ್‌ಕೀಪರ್-ಬ್ಯಾಟರ್ ದಿನೇಶ್ ರಾಮ್‌ದಿನ್(Denesh Ramdin) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ(international cricket) ಗುಡ್‌ಬೈ ಹೇಳಿದ್ದಾರೆ. ವಿಂಡೀಸ್ ಪಡೆಯ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸಿದ್ದ ರಾಮ್‌ದಿನ್, ಆ ಮೂಲಕ ತಮ್ಮ 17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿರುವ ಅವರು, ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಮುಂದುವರಿಸುವುದಾಗಿ ತಿಳಿಸಿದ್ದಾರೆ.
2005ರಲ್ಲಿ ವೆಸ್ಟ್ ಇಂಡೀಸ್‌ಗೆ ತಂಡಕ್ಕೆ ಪಾದಾರ್ಪಣೆ ಮಾಡಿದ ದಿನೇಶ್ ರಾಮ್‌ದಿನ್ 74 ಟೆಸ್ಟ್, 139 ODI ಮತ್ತು 71 T20I ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 2012 ಮತ್ತು 2016ರಲ್ಲಿ ವೆಸ್ಟ್ ಇಂಡೀಸ್‌ನ T20 ವಿಶ್ವಕಪ್ ವಿಜೇತ ತಂಡದಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಹೊಂದಿದ್ದಾರೆ. 37 ವರ್ಷದ ರಾಮ್‌ದಿನ್ ಕೊನೆಯದಾಗಿ 2019ರಲ್ಲಿ ಟೆಸ್ಟ್ ಮತ್ತು 2016ರಲ್ಲಿ ವೆಸ್ಟ್ ಇಂಡೀಸ್ ಪರ ವೈಟ್-ಬಾಲ್ ಕ್ರಿಕೆಟ್ ಆಡಿದ್ದರು.

“ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ತುಂಬಾ ಸಂತೋಷವಾಗಿದೆ. ಟ್ರಿನಿಡಾಡ್ ಮತ್ತು ಟೊಬಾಗೊ ಮತ್ತು ವೆಸ್ಟ್ ಇಂಡೀಸ್‌ಗಾಗಿ ಕ್ರಿಕೆಟ್ ಆಡುವ ಮೂಲಕ ನನ್ನ ಬಾಲ್ಯದ ಕನಸುಗಳನ್ನು ಈಡೇರಿಸಿಕೊಂಡಿದ್ದೇನೆ. ನನ್ನ ಕ್ರಿಕೆಟ್ ವೃತ್ತಿಜೀವನ ನನಗೆ ಅತ್ಯುತ್ತಮ ಅವಕಾಶವನ್ನು ನೀಡಿತು. ಜಗತ್ತನ್ನು ನೋಡಿ, ವಿಭಿನ್ನ ಸಂಸ್ಕೃತಿಗಳಿಂದ ಸ್ನೇಹಿತರನ್ನು ಮಾಡಿಕೊಳ್ಳಲು ಕ್ರಿಕೆಟ್ ನೆರವಾಯಿತು ಎಂದು ದೆನೇಶ್ ರಾಮ್‌ದಿನ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದರೂ, ನಾನು ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿಯಾಗುತ್ತಿಲ್ಲ. ಹೀಗಾಗಿ ಮುಂದಿನ ದಿನದಲ್ಲಿ ನಾನು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುತ್ತೇನೆ”. ನನ್ನ 14 ವರ್ಷಗಳ ವೃತ್ತಿಜೀವನದ ಮೇಲೆ ಪ್ರಭಾವ ಬೀರಿದ ಎಲ್ಲರಿಗೂ ಹಾಗೂ ವಿಶೇಷವಾಗಿ ನನ್ನ ಕುಟುಂಬ, ನನ್ನ ಸುಂದರ ಹೆಂಡತಿ ಜಾನೆಲ್ಲೆ ಮತ್ತು ನಮ್ಮ ಮಕ್ಕಳು ಧೀರ್ಘಕಾಲದವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡಿದ್ದಾಗ ಮಾಡಿದ ಎಲ್ಲಾ ತ್ಯಾಗಗಳಿಗಾಗಿ ನಾನು ಕೃತಜ್ಞತೆ ಸಲ್ಲಿಸಲು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ” ಎಂದು ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ರಾಮ್‌ದಿನ್, 13 ಟೆಸ್ಟ್ ಸೇರಿದಂತೆ 17 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ ನಾಯಕನಾಗಿ ನಿರೀಕ್ಷಿತ ಸಕ್ಸಸ್ ಕಾಣದ ರಾಮ್‌ದಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ 2898 ರನ್‌ಗಳು, 2,200 ODI ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೇ ಅವರು 71 ಟಿ20 ಪಂದ್ಯಗಳಲ್ಲಿ 636 ರನ್‌ಗಳಿಸಿದ್ದಾರೆ.