ವರ್ಷಾಂತ್ಯದಲ್ಲಿ ನಡೆಯುವ ಟಿ20 ವಿಶ್ವಕಪ್(T20 World Cup) ಟೂರ್ನಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾ(Team India) ಆಸ್ಟ್ರೇಲಿಯಾ(Australia) ಮತ್ತು ಸೌತ್ ಆಫ್ರಿಕಾ(South Africa) ವಿರುದ್ಧ ತವರಿನಲ್ಲಿ ಮೂರು T20I ಪಂದ್ಯಗಳನ್ನು ಆಡಲಿದೆ. ನಂತರ ಸೌತ್ ಆಫ್ರಿಕಾ ಹಾಗೂ ಭಾರತ ತಂಡಗಳು ಮೂರು ಏಕದಿನ ಪಂದ್ಯಗಳನ್ನು ಆಡಲಿದ್ದು, ಎರಡು ತಂಡಗಳ 2ನೇ ತಂಡಗಳು ಈ ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ತವರಿನಲ್ಲಿ ಮೊದಲಿಗೆ ಆಸ್ಟ್ರೇಲಿಯಾ ಸವಾಲು ಎದುರಿಸಲಿರುವ ಟೀಂ ಇಂಡಿಯಾ, ಮೊಹಾಲಿ(ಸೆಪ್ಟೆಂಬರ್ 20), ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್(ಸೆಪ್ಟೆಂಬರ್ 25)ನಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಇದಾದ ನಂತರದಲ್ಲಿ ತಿರುವನಂತಪುರ (ಸೆಪ್ಟೆಂಬರ್ 28), ಗುವಾಹಟಿ (ಅಕ್ಟೋಬರ್ 1) ಮತ್ತು ಇಂದೋರ್ (ಅಕ್ಟೋಬರ್ 3) ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಕೂಡ ಮೂರು ಟಿ20 ಪಂದ್ಯವನ್ನು ಆಡುವ ಮೂಲಕ ವಿಶ್ವಕಪ್ ಟೂರ್ನಿಗಾಗಿ ಕಾಂಗರೂ ನಾಡಿಗೆ ತೆರಳಲಿದೆ.
ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಬೆನ್ನಲ್ಲೇ ಸೌತ್ ಆಫ್ರಿಕಾ ತಂಡದ ಸವಾಲು ಎದುರಿಸಲಿರುವ ಭಾರತ, ತವರಿನಲ್ಲಿ ನಡೆಯುವ ಮೂರು ODI ಪಂದ್ಯಗಳಲ್ಲಿ ಮುಖಾಮುಖಿ ಆಗಲಿವೆ. ಉಭಯ ತಂಡಗಳ ನಡುವೆ ರಾಂಚಿ(ಅಕ್ಟೋಬರ್ 3), ಲಕ್ನೋ(ಅಕ್ಟೋಬರ್ 9) ಹಾಗೂ ದೆಹಲಿ(ಅಕ್ಟೋಬರ್ 11) ನಡೆಯಲಿದೆ. ಆದರೆ ಏಕದಿನ ಟೂರ್ನಿಯಲ್ಲಿ ಎರಡು ರಾಷ್ಟ್ರಗಳ ಎರಡನೇ ತಂಡಗಳು ಹಣಾಹಣಿ ನಡೆಸಲಿದೆ.
ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಆಟಗಾರರು, ತವರಿನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆಯುವ ODI ಸರಣಿಯಿಂದ ಹೊರಗುಳಿಯಲಿದ್ದಾರೆ. ಟೀಂ ಇಂಡಿಯಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಅಕ್ಟೋಬರ್ 23ರಂದು ಪಾಕಿಸ್ತಾನ ತಂಡವನ್ನ ಎದುರಿಸಲಿದೆ.
ಭಾರತ vs ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ವೇಳಾಪಟ್ಟಿ
T20Is vs ಆಸ್ಟ್ರೇಲಿಯಾ
1ನೇ ಟಿ20 – ಸೆಪ್ಟೆಂಬರ್ 20, ಮೊಹಾಲಿ
2ನೇ ಟಿ20 – ಸೆಪ್ಟೆಂಬರ್ 23, ನಾಗ್ಪುರ
3ನೇ ಟಿ20 – ಸೆಪ್ಟೆಂಬರ್ 25, ಹೈದ್ರಾಬಾದ್
T20Is vs ಸೌತ್ ಆಫ್ರಿಕಾ
1ನೇ ಟಿ20 – ಸೆಪ್ಟೆಂಬರ್ 28, ತಿರುವನಂತಪುರಂ
2ನೇ ಟಿ20 – ಅಕ್ಟೋಬರ್ 1, ಗುವಾಹಟಿ
3ನೇ ಟಿ20 – ಇಂಧೋರ್
ODIs vs ಸೌತ್ ಆಫ್ರಿಕಾ
1ನೇ ODI – ಅಕ್ಟೋಬರ್ 6, ರಾಂಚಿ
2ನೇ ODI – ಅಕ್ಟೋಬರ್ 9, ಲಕ್ನೋ
3ನೇ ODI – ಅಕ್ಟೋಬರ್ 11, ದೆಹಲಿ