Olympics – ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಟೂರ್ನಿ ಯಾವಾಗ ?

ಈ ಬಾರಿಯ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನ ಪ್ರಮುಖ ಆಕರ್ಷಣೆ ಮಹಿಳಾ ಕ್ರಿಕೆಟ್ ಟೂರ್ನಿ.
ಜುಲೈ 28ರಿಂದ ನಡೆಯಲಿರುವ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಎಂಟು ಮಹಿಳಾ ಕ್ರಿಕೆಟ್ ತಂಡಗಳು ಆಡಲಿವೆ. ಒಟ್ಟು ಹತ್ತು ದಿನಗಳ ಟಿ-20 ಕ್ರಿಕೆಟ್ ಟೂರ್ನಿ ನಡೆಯಲಿದೆ.
ಅಂದ ಹಾಗೇ 1998ರ ಕಾಮನ್ ವೆಲ್ತ್ ಗೇಮ್ಸ್ ಬಳಿಕ ಅಂದ್ರೆ 24 ವರ್ಷಗಳ ಬಳಿಕ ಇದೇ ಮೊದಲ ಬಾರಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಲಾಗಿದೆ.
ಇದೀಗ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಿಕೊಳ್ಳಲಿದೆ. ಹೀಗಿರುವಾಗ ಮುಂಬರುವ ದಿನಗಳಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲೂ ಕ್ರಿಕೆಟ್ ಆಟವನ್ನು ಸೇರಿಸಿಕೊಳ್ಳಬಹುದು ಎಂದು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಶಕಗಳ ಹಿಂದೆ ನಡೆದಿದ್ದ ಕಾಮನ್ ವೆಲ್ಸ್ ಗೇಮ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು.

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಿಕೊಂಡ್ರೆ ಅದೊಂದು ಅದ್ಭುತವಾಗಲಿದೆ. ಯಾಕಂದ್ರೆ ಇಲ್ಲಿ ಹೊಸ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತದೆ. ಅಲ್ಲದೆ ಕ್ರಿಕೆಟ್ ಆಟದ ವಿಸ್ತಾರವನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೆ ಮಹಿಳಾ ಕ್ರಿಕೆಟ್ ಗೂ ಉತ್ತೇಜನ ನೀಡಿದಾಂತಾಗುತ್ತದೆ ಎಂದು ಮೆಗ್ ಲ್ಯಾನಿಂಗ್ ಹೇಳಿದ್ದಾರೆ.
2024ರ ಒಲಿಂಪಿಕ್ಸ್ ಗೇಮ್ಸ್ ಪ್ಯಾರೀಸ್ ನಲ್ಲಿ ನಡೆದ್ರೆ, 2028ರಲ್ಲಿ ಲಾಸ್ ಏಂಜಲೀಸ್ ಮತ್ತು 2032ರ ಒಲಿಂಪಿಕ್ಸ್ ಗೇಮ್ಸ್ ಬ್ರಿಸ್ಬೇನ್ ನಲ್ಲಿ ನಡೆಯಲಿದೆ.
ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ನಾವು ಚಿನ್ನದ ಪದಕ ಗೆಲ್ಲುವುದನ್ನು ಎದುರು ನೋಡುತ್ತಿದ್ದೇವೆ. ನಮ್ಮ ತಂಡ ಹುರುಪಿನಲ್ಲಿದೆ. ಹೊಸ ಸವಾಲುಗಳನ್ನು ಎದುರಿಸಲು ಸಿದ್ದವಿದ್ದೇವೆ ಎಂದು ಮೆಕ್ ಲ್ಯಾನಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜುಲೈ 28ರಿಂದ ಆಗಸ್ಟ್ 8ರವರೆಗೆ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ಸ್ ಗೇಮ್ಸ್ ನಡೆಯಲಿದೆ. 72 ರಾಷ್ಟ್ರಗಳ ಸುಮಾರು 5000 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಒಟ್ಟು 22 ಸ್ಪರ್ಧೆಗಳು ನಡೆಯಲಿವೆ. ಭಾರತದಿಂದ ಒಟ್ಟು 2015 ಮಂದಿ ಸ್ಪರ್ಧಿಗಳು 15 ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.