ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಅವರಿಗೆ ಇದೀಗ ದೊಡ್ಡ ಗೌರವ ಒಲಿದು ಬಂದಿದೆ. 73 ನೇ ಗಣರಾಜ್ಯೋತ್ಸವದಂದು, ನೀರಜ್ ಅವರಿಗೆ ದೇಶದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಪರಮ ವಿಶಿಷ್ಟ ಸೇವಾ ಪದಕವನ್ನು ನೀಡಲಿದ್ದಾರೆ. 384 ಮಂದಿಗೆ ಶೌರ್ಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕವನ್ನು ನೀಡಲಾಗುವುದು. 26 ಜನವರಿ 2022 ಬುಧವಾರದಂದು ಅವರನ್ನು ಈ ಗೌರವದಿಂದ ಗೌರವಿಸಲಾಗುವುದು.
ಈ ವರ್ಷ 12 ಶೌರ್ಯ ಚಕ್ರಗಳು, 29 ಪರಮ ವಿಶಿಷ್ಟ ಸೇವಾ ಪದಕಗಳು, 4 ಉತ್ತಮ ಯುದ್ಧ ಸೇವಾ ಪದಕಗಳು, 53 ಅತಿ ವಿಶಿಷ್ಟ ಸೇವಾ ಪದಕಗಳು, 13 ಯುದ್ಧ ಸೇವಾ ಪದಕಗಳು ಸೇರಿವೆ. ನೀರಜ್ ಚೋಪ್ರಾ ಅವರಿಗೆ ಪರಮ ವಿಶಿಷ್ಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
Neeraj Chopra to be awarded with Param Vashistha Seva Medal on Republic Day
Read @ANI Story | https://t.co/kQYhJwXTxV#NeerajChopra #RepublicDay2022 #ParamVashisthaSevaMedal pic.twitter.com/DS0BzEpNcU
— ANI Digital (@ani_digital) January 25, 2022