Odisha Open badminton – ಪ್ರಶಸ್ತಿ ಗಾಗಿ ಪ್ರಿಯಾಂಶ್ ಮತ್ತು ಕಿರಣ್ ಜಾರ್ಜ್ ಹೋರಾಟ
ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಫೈನಲ್ ನಲ್ಲಿ ಕಿರಣ್ ಜಾರ್ಜ್ ಮತ್ತು ಪ್ರಿಯಾಂಶು ರಾಜವತ್ ಅವರು ಹೋರಾಟ ನಡೆಸಲಿದ್ದಾರೆ.
ಸೆಮಿಫೈನಲ್ ಪಂದ್ಯದಲ್ಲಿ ಪ್ರಿಯಾಂಶು ರಾಜವತ್ ಅವರು 21-17, 21-14ರಿಂದ ಕುಶಾಲ್ ಧರ್ಮಮೆರ್ ಅವರನ್ನು ಕೇವಲ 36 ನಿಮಿಷಗಳ ಹೋರಾಟದಲ್ಲಿ ಪರಾಭವಗೊಳಿಸಿದ್ರು.
ಇನ್ನೊಂದು ಸೆಮಿಫೈನಲ್ ನಲ್ಲಿ ಕಿರಣ್ ಜಾರ್ಜ್ ಅವರು 19-21, 21-12, 21-14ರಿಂದ ಅನ್ಸಾಲ್ ಯಾದವ್ ಅವರನ್ನು ಮಣಿಸಿದ್ರು.
ಇನ್ನು ಪುರುಷರ ಡಬಲ್ಸ್ ನಲ್ಲಿ ಪಿ.ಎಸ್. ರವಿಕೃಷ್ಣನ್ ಮತ್ತು ಶಂಕರ್ ಪ್ರಸಾದ್ ಉದಯಕುಮಾರ್ 21-12, 18-21, 21-18ರಿಂದ ವಸಂತ್ ಕುಮಾರ್ ರಂಗನಾಥ್ ಮತ್ತು ಆಶಿತ್ ಸೂರ್ಯ ಅವರನ್ನು ಮಣಿಸಿದ್ರು.
Odisha Open badminton – Priyanshu and Kiran advanced to the final
ಫೈನಲ್ ನಲ್ಲಿ ಶಂಕರ್ ಪ್ರಸಾದ್ ಮತ್ತು ರವಿಕೃಷ್ಣನ್ ಜೋಡಿ ಮಲೇಶಿಯಾದ ನೂರ್ ಮಹಮ್ಮದ್ ಅಯುಬ್ ಆಝ್ರಿಯನ್ ಮತ್ತು ಲಿ ಖಿಮ್ ಅವರನ್ನು ಎದುರಿಸಲಿದ್ದಾರೆ.
ನೂರ್ ಮಹಮ್ಮದ್ ಆಯುಬ್ ಆಝ್ರಿಯನ್ ಮತ್ತು ಲೀ ಖಿಮ್ ಅವರು 15-21, 21-18, 21-17ರಿಂದ ಶ್ರೀಲಂಖಾದ ಸಚಿನ್ ಡಯಾಸ್ ಮತ್ತು ಬುವೆಂಕಾ ಅವರನ್ನು ಪರಾಭವಗೊಳಿಸಿದ್ರು.
ಮಿಕ್ಸೆಡ್ ಡಬಲ್ಸ್ ನಲ್ಲಿ ಎಮ್.ಆರ್. ಅರ್ಜುನ್ ಮತ್ತು ತ್ರಿಸಾ ಜೊಲಿ 21-9, 21-9ರಿಂದ ಬಲ್ಕೇಶರಿ ಯಾದವ್ ಮತ್ತು ಶ್ವೇತಾಪರ್ಣ ಪಾಂಡಾ ಅವರನ್ನು ಸೋಲಿಸಿದ್ರು.
ಫೈನಲ್ ನಲ್ಲಿ ಅರ್ಜುನ್ ಮತ್ತು ತ್ರಿಸಾ ಅವರು ಶ್ರೀಲಂಕಾದ ಸಚಿನ್ ಡಯಾಸ್ ಮತ್ತು ತಿಲಿನಿ ಹೆಂದ್ವಾ ಅವರನ್ನು ಎದುರಿಸಲಿದ್ದಾರೆ.