Odisha Open badminton- ಪ್ರಶಸ್ತಿ ಗೆದ್ದ 14ರ ಹರೆಯ ಬಾಲೆ ಉನ್ನತಿ ಹೂಡಾ..!
ಭಾರತೀಯ ಬ್ಯಾಡ್ಮಿಂಟನ್ ರಂಗದ ಭರವಸೆಯ ಬೆಳಕಾಗಿ 14ರ ಹರೆಯದ ಉನ್ನತಿ ಹೂಡಾ ಅವರು ಹೊರಹೊಮ್ಮಿದ್ದಾರೆ.
ಸೈನಾ, ನೆಹ್ವಾಲ್, ಪಿ.ವಿ. ಸಿಂಧೂ ಉತ್ತರಾಧಿಕಾರಿಯಾಗಿ ವಿಶ್ವಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಭರವಸೆಯನ್ನು ಮೂಡಿಸಿರುವ ಹೆಮ್ಮೆಯ ಹುಡುಗಿ ಉನ್ನತಿ ಹೂಡಾ.
ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಪ್ರಶಸ್ತಿ ಗೆದ್ದಿರುವ ಉನ್ನತಿ ಹೂಡಾ ಅವರು ಹೊಸ ಇತಿಹಾಸವನ್ನೇ ಬರೆದಿದ್ದಾರೆ,
ಸೂಪರ್ 100 (ಹಂಡ್ರೆಡ್) ಸಿರೀಸ್ ಗೆದ್ದಿರುವ ಅತೀ ಕಿರಿಯ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಉನ್ನತಿ ಹೂಡಾ ಅವರು ಪಾತ್ರರಾಗಿದ್ದಾರೆ.
ಕಟಕ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಉನ್ನತಿ ಹೂಡಾ ಅವರು ಅದ್ಭುತವಾದ ಆಟವನ್ನೇ ಆಡಿದ್ದರು. ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿಕೊಂಡ ಉನ್ನತಿ ಹೂಡಾ 21-18, 21-11ರಿಂದ ಸ್ಮಿತ್ ಟೊಶ್ನಿವಾಲ್ ಅವರನ್ನು ಪರಾಭವಗೊಳಿಸಿದ್ರು.
Odisha Open badminton : 14-year-old Unnati claims title
ಈ ಹಿಂದೆ ಸೆಮಿಫೈನಲ್ ನಲ್ಲಿ ಉನ್ನತಿ ಹೂಡಾ ಅವರು ಮಾಲ್ವಿಕಾ ಬನ್ಸೋದ್ ಅವರನ್ನು ಸೋಲಸಿದ್ದರು. ಮಾಲ್ವಿಕಾ ಬನ್ಸೋದ್ ಅವರು ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
ಚಾಂಪಿಯನ್ ಆಟಗಾರ್ತಿಯಂತೆ ಆಡಿದ್ದ ಉನ್ನತಿ ಅವರು ಒಡಿಸ್ದಾ ಓಪನ್ ಟೂರ್ನಿಯಲ್ಲಿ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದ್ರು.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಕಿರಣ್ ಜಾಜ ಅವರು 21-15, 14-21, 21-18ರಿಂದ ಪ್ರಿಯಾಂಶು ರಾಜವತ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡ್ರು.
ಮಹಿಳೆಯರ ಡಬಲ್ಸ್ ನಲ್ಲಿ ಗಾಯತ್ರಿ ಗೋಪಿಚಂದ್ ಮತ್ತು ತ್ರಿಸಾ ಜೋಲಿ ಅವರು 21-12, 21-10ರಿಂದ ಸಂಯೋಗಿತಾ ಘೋರ್ಪಡೆ ಮತ್ತು ಶೃತಿ ಮಿಶ್ರಾ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡ್ರು. ಗಾಯತ್ರಿ ಗೋಪಿಚಂದ್ ಅವರು ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪುಲ್ಲೇಲ ಗೋಪಿಚಂದ್ ಅವರ ಪುತ್ರಿಯಾಗಿದ್ದಾರೆ.
ಮಿಕ್ಸೆಡ್ ಡಬಲ್ಸ್ ನಲ್ಲಿ ಶ್ರೀಲಂಕಾದ ಸಚಿನ್ ಡಯಾಸ್ ಮತ್ತು ತಿಲಿನಿ ಹೆಂದಾದೆವಾ ಅವರು ಭಾರತದ ಎಮ್. ಆರ್. ಅರ್ಜುನ್ ಮತ್ತು ತ್ರಿಸಾ ಜೋಲಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡ್ರು.