Odisha Open badminton – ಸೆಮಿಫೈನಲ್ ಪ್ರವೇಶಿಸಿದ ಮಾಲ್ವಿಕಾ ಬನ್ಸೋದ್
ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನಲ್ಲಿ ಯುವ ಆಟಗಾರ್ತಿ ಮಾಲ್ವಿಕಾ ಬನ್ಸೋದ್ ಅವರು ಗೆಲುವಿನ ಅಭಿಯಾನ ಮುಂದುವರಿದಿದೆ.
ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಲ್ವಿಕಾ ಬನ್ಸೋದ್ ಅವರು 21-13, 16-21, 21-17ರಿಂದ ತನ್ಯಾ ಹೇಮಂತ್ ವಿರುದ್ದ ಪ್ರಯಾಸದ ಜಯ ಸಾಧಿಸಿದ್ರು.
ಈ ಹಿಂದೆ ನಡೆದಿದ್ದ ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮಾಲ್ವಿಕಾ ಅವರು ರನ್ನರ್ ಅಪ್ ಆಗಿದ್ದರು. ಫೈನಲ್ ನಲ್ಲಿ ಮಾಲ್ವಿಕಾ ಅವರು ಪಿ.ವಿ. ಸಿಂಧು ವಿರುದ್ದ ಸೋಲು ಅನುಭವಿಸಿದ್ದರು. ಹಾಗೆ ಇಂಡಿಯನ್ ಓಪನ್ ಟೂರ್ನಿಯಲ್ಲಿ ಮಾಲ್ವಿಕಾ ಬನ್ಸೋದ್ ಅವರ ಸೈನಾ ನೆಹ್ವಾಲ್ ಅವರನ್ನು ಅಚ್ಚರಿಗೊಳಿಸಿದ್ದರು. ಇದೀಗ ಒಡಿಸ್ಸಾ ಓಪನ್ ಟೂರ್ನಿಯಲ್ಲಿ ಮಾಲ್ವಿಕಾ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದಾರೆ.
Odisha Open badminton – Malvika powers through to semis
ಮಹಿಳೆಯರ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಐದನೇ ಶ್ರೇಯಾಂಕಿತೆ ಆಶ್ಮಿತಾ ಚಾಲಿಹ ಅವರು 21-17, 21-15ರಿಂದ ರುಚಾ ಸಾವಂತ್ ಅವರನ್ನು ಸೋಲಿಸಿದ್ರು. ಸೆಮಿಫೈನಲ್ ನಲ್ಲಿ ಆಶ್ಮಿತಾ ಅವರು ಸ್ಮಿತ್ ಟೊಶ್ನಿವಾಲ್ ಅವರನ್ನು ಎದುರಿಸಲಿದ್ದಾರೆ. ಸ್ಮಿತ್ ಟೊಶ್ನಿವಾಲ್ ಅವರು 8-21, 21-9, 21-14ರಿಂದ ಅಮೆರಿಕಾದ ಐಶಿಕಾ ಜೈಸ್ವಾಲ್ ಅವರನ್ನು ಸೋಲಿಸಿದ್ರು.
ಮಹಿಳೆಯರ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉನ್ನತಿ ಹೂಡಾ ಅವರು 21-10, 21-15ರಿಂದ ಸಮಿಯಾ ಇಮಾದ್ ಫಾರೂಕ್ಯು ಅವರನ್ನು 25 ನಿಮಿಷಗಳ ಹೋರಾಟದಲ್ಲಿ ಮಣಿಸಿದ್ರು. ಸೆಮಿಫೈನಲ್ ನಲ್ಲಿ ಉನ್ನತಿ ಹೂಡಾ ಅವರು ಮಾಲ್ವಿಕಾ ಬನ್ಸೋದ್ ಅವರನ್ನು ಎದುರಿಸಲಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಐದನೇ ಶ್ರೇಯಾಂಕಿತೆ ತ್ರೇಸಾ ಜೊಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು 21-7, 21-3ರಿಂದ ಕೇವಲ 18 ನಿಮಿಷಗಳ ಹೋರಾಟದಲ್ಲಿ ವೈಷ್ಣವಿ ಖಡೇಕರ್ ಅವರನ್ನು ಪರಾಭವಗೊಳಿಸಿದ್ರು. ತ್ರೇಸಾ ಮತ್ತು ಗಾಯತ್ರಿ ಅವರು ಸೆಮಿಫೈನಲ್ ನಲ್ಲಿ ಅರುಲ್ ಬಾಲಾ ರಾಧಾಕೃಷ್ಣನ್ ಮತ್ತು ನೀಲಾ ವಲ್ಲುವಾನ್ ಅವರನ್ನು ಎದುರಿಸಲಿದ್ದಾರೆ.