Aus Open 2022:- ಮಹಿಳೆಯ ಡಬಲ್ಸ್ ಪ್ರಶಸ್ತಿ ಗೆದ್ದ ಕ್ರೆಜಿಸಿಕೊವಾ – ಸಿನಿಯಾಕೊವಾ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ನಲ್ಲಿ ಚೆಕ್ ಗಣರಾಜ್ಯದ ಕ್ಯಾತೆರಿನಾ ಸಿನಿಯಾಕೊವಾ ಮತ್ತು ಬಾರ್ಬೊರಾ ಕ್ರೆಜಿಸಿಕೊವ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಫೈನಲ್ ಪಂದ್ಯದಲ್ಲಿ ಕ್ಯಾತೆರಿನಾ ಸಿನಿಯಾಕೊವಾ ಮತ್ತು ಬಾರ್ಬೊರಾ ಕ್ರೆಜಿಸಿಕೊವಾ ಅವರು 6-4ಮ 6-4 ನೇರ ಸೆಟ್ ಗಳಿಂದ ಅನ್ನಾ ಡ್ಯಾನಿಲಿನಾ ಮತ್ತು ಬೀಟ್ರೀಝ್ ಹ್ಯಾಡಾದ್ ಮೈಯ್ ಅವರನ್ನು ಪರಾಭವಗೊಳಿಸಿದ್ರು.
ವಿಸ್ವದ ನಂಬರ್ ವನ್ ಡಬಲ್ಸ್ ಜೋಡಿಯಾಗಿರುವ ಕ್ಯಾತೆರಿನಾ ಸಿನಿಯಾಕೊವಾ ಮತ್ತು ಬಾರ್ಬೊರಾ ಕ್ರೆಜೆಸಿಕೊವಾ ಅವರು ಗೆಲ್ಲುತ್ತಿರುವ ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯಾಗಿದೆ. 2018 ಮತ್ತು 2019ರಲ್ಲಿ ಫ್ರೆಂಚ್ ಓಪನ್ ಹಾಗೂ 2018ರ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಇನ್ನು ಪುರುಷರ ಡಬಲ್ಸ್ ನಲ್ಲಿ ನಿಕ್ ಕೈರ್ಗಿಸ್ ಮತ್ತು ಥಾನಾಸಿ ಕೊಕಿನಾಕಿಸ್ ಅವರು ಚೊಚ್ಚಲ ಬಾರಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.