Odisha Open badminton – ಮಾಲ್ವಿಕಾಗೆ ಆಘಾತ ನೀಡಿದ 14ರ ಬಾಲೆ ಉನ್ನತಿ
ಒಡಿಸ್ಸಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭವಿಷ್ಯದ ಸ್ಟಾರ್ ಆಟಗಾರ್ತಿಯೊಬ್ಬಳ ಉದಯವಾಗಿದೆ.
ಹೌದು, 14ರ ಹರೆಯದ ಉನ್ನತಿ ಹೂಡಾ ಈಗ ಹೆಡ್ ಲೈನ್ ಸುದ್ದಿಯಾಗಿದ್ದಾರೆ. ಟೂರ್ನಿಯ ಸೆಮಿಪೈನಲ್ ನಲ್ಲಿ ಉನ್ನತಿ ಹೂಡಾ ಅವರು ಅಗ್ರ ಶ್ರೇಯಾಂಕಿತೆ ಮಾಲ್ವಿಕಾ ಬನ್ಸೋದ್ ಅವರಿಗೆ ಆಘಾತ ನೀಡಿದ್ದಾರೆ.
Odisha Open badminton – 14-year-old Hooda stuns Bansod to sail into final
ಸಯ್ಯದ್ ಮೋದಿ ಇಂಟರ್ ನ್ಯಾಷನಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದ ಮಾಲ್ವಿಕಾ ಬನ್ಸೋದ್ ಅವರು ಒಡಿಸ್ಸಾ ಓಪನ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು.
ಆದ್ರೆ ಮಾಲ್ವಿಕಾ ಬನ್ಸೋದ್ ಅವರ ಪ್ರಶಸ್ತಿ ಗೆಲ್ಲುವ ಆಸೆಯನ್ನು ಉನ್ನತಿ ಹೂಡ ಭಗ್ನಗೊಳಿಸಿದ್ರು.
ಜಿದ್ದಾ ಜಿದ್ದಿನಿಂದ ಸಾಗಿದ ಸೆಮಿಫೈನಲ್ ಪಂದ್ಯದಲ್ಲಿ ಉನ್ನತಿ ಹೂಡಾ ಅವರು 24-22, 24-22ರಿಂದ ಮಾಲ್ವಿಕಾ ಬನ್ಸೋದ್ ಅವರನ್ನು ಪರಾಭವಗೊಳಿಸಿದ್ರು.
ಮಹಿಳೆಯರ ಇನ್ನೊಂದು ಸೆಮಿಫೈನಲ್ ನಲ್ಲಿ ಸ್ಮಿತ್ ಟೊಶ್ನಿವಾಲ್ ಅವರು 21-19, 10-21, 21-17ರಿಂದ ಐದನೇ ಶ್ರೇಯಾಂಕಿತೆ ಆಶ್ಮಿತಾ ಚಾಲಿಹಾ ಅವರನ್ನು 61 ನಿಮಿಷಗಳ ಕಾದಾಟದಲ್ಲಿ ಅಚ್ಚರಿಗೊಳಿಸಿದ್ರು.
ಒಡಿಸ್ಸಾ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ಉನ್ನತಿ ಹೂಡಾ ಮತ್ತು ಸ್ಮಿತ್ ಟೊಶ್ನಿವಾಲ್ ಅವರು ಹೋರಾಟ ನಡೆಸಲಿದ್ದಾರೆ.
ಉನ್ನತಿ ಹೂಡಾ ಅವರು ಭಾರತದ ಭರವಸೆಯ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಶ್ರೇಯಾಂಕ ಪಟ್ಟಿಯಲ್ಲಿ ಉನ್ನತಿ ಹೂಡಾ ಅವರು 418ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಹಾಗೇ ಸ್ಮಿತ್ ಟೋಶ್ನಿವಾಲ್ ಅವರು 163ನೇ ಶ್ರೇಯಾಂಕದಲ್ಲಿದ್ದಾರೆ.
ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ಎಂಟನೇ ಶ್ರೇಯಾಂಕಿತೆಯರಾದ ಸನ್ಯೋಗೀತಾ ಘೋರ್ಪಡೆ ಮತ್ತು ಶೃತಿ ಮಿಶ್ರಾ ಅವರು 10-21, 21-18, 21-17ರಿಂದ ಇಂಡೋ ಅಮೆರಿಕನ್ Pಜೋಡಿ ಶ್ರೀ ವಿದ್ಯಾ ಗುರಾಝಾಡ ಮತ್ತು ಐಶಿಕಾ ಜೈಸ್ವಾಲ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ರು.
ಮತ್ತೊಂದು ಸೆಮಿಫೈನಲ್ ನಲ್ಲಿ ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಅವರು 21-9, 21-6ರಿಂದ ಅರುಲ್ ಬಾಲಾ ರಾಧಾಕೃಷ್ಣನ್ ಮತ್ತು ನೀಲಾ ವಾಲುವಾನ್ ಅವರನ್ನು ಸೋಲಿಸಿದ್ರು.
ಮಹಿಳೆಯರ ಡಬಲ್ಸ್ ನಲ್ಲಿ ಸನ್ಯೋಗೀತಾ ಫೋರ್ಪಡೆ ಮತ್ತು ಶೃತಿ ಮಿಶ್ರಾ ಅವರು ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಅವರನ್ನು ಎದುರಿಸಲಿದ್ದಾರೆ.