ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ನ್ಯೂಜಿ಼ಲೆಂಡ್ ತಂಡವನ್ನ ಪ್ರಕಟಿಸಲಾಗಿದ್ದು, ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಲಂಕಾ ಸವಾಲು ಎದುರಿಸಲು ಸಜ್ಜಾಗಿದೆ.
ಉಭಯ ತಂಡಗಳ ನಡುವಿನ ಏಕದಿನ ಸರಣಿ ಮಾರ್ಚ್ 25ರಿಂದ ಆರಂಭವಾಗಲಿದ್ದು, ಅತಿಥೇಯ ಕಿವೀಸ್ ತಂಡಕ್ಕೆ ಕೇನ್ ವಿಲಿಯಂಸನ್, ಟಿಮ್ ಸೌಥಿ, ಡೆವೊನ್ ಕಾನ್ವೆ ಹಾಗೂ ಮಿಚೆಲ್ ಸ್ಯಾಂಟ್ನರ್ ಅವರುಗಳ ಅನುಪಸ್ಥಿತಿ ಎದುರಾಗಿದೆ. ಅಲ್ಲದೇ ಮೊದಲ ಏಕದಿನ ಪಂದ್ಯದ ಬಳಿಕ ಫಿನ್ ಅಲೆನ್, ಲಾಕ್ಕಿ ಫೆರ್ಗುಸನ್ ಹಾಗೂ ಗ್ಲೆನ್ ಫಿಲಿಪ್ಸ್ ಅವರುಗಳನ್ನು ಸಹ ODI ತಂಡದಿಂದ ಕೈಬಿಡಲಾಗಿದೆ.
ಇದಲ್ಲದೇ ಎರಡನೇ ಏಕದಿನ ಪಂದ್ಯದ ಬಳಿಕ ಹೆನ್ರಿ ನಿಕೋಲ್ಸ್, ಮಾರ್ಕ್ ಚಾಪ್ಮನ್ ಮತ್ತು ಬೆನ್ ಲಿಸ್ಟರ್ ಅವರುಗಳನ್ನ ಸಹ ತಂಡದಿಂದ ಕೈಬಿಡಲಾಗಿದೆ. ಆದರೆ ಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೂಲಕ ವಿಲ್ ಯಂಗ್ ಹಾಗೂ ಟಾಮ್ ಬ್ಲಂಡಲ್ ಅವರುಗಳು ಕಿವೀಸ್ ODI ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಉಳಿದಂತೆ ಟಾಮ್ ಲಾಥಂ ಅವರ ಸಾರಥ್ಯದಲ್ಲಿ ಕಿವೀಸ್ ತಂಡದ ODI ಸರಣಿಯಲ್ಲಿ ಕಣಕ್ಕಿಳಿಯಲಿದ್ದು, ಡೆರಿಲ್ ಮಿಚೆಲ್, ಇಶ್ ಸೋಧಿ ಮತ್ತು ಮೈಕಲ್ ಬ್ರೇಸ್ವೆಲ್ ಅವರುಗಳು ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಈ ಸರಣಿಯೊಂದಿಗೆ ಯುವ ಆಟಗಾರ ಚಾಡ್ ಬೌವ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಂಟ್ರಿಕೊಡಲಿದ್ದಾರೆ.
ಅತಿಥೇಯ ನ್ಯೂಜಿ಼ಲೆಂಡ್ ಮತ್ತು ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮಾರ್ಚ್ 25ರಿಂದ 31ರವರೆಗೆ ಆಕ್ಲೆಂಡ್, ಕ್ರೈಸ್ಟ್ಚರ್ಚ್ ಹಾಗೂ ಹ್ಯಾಮಿಲ್ಟನ್ನಲ್ಲಿ ನಡೆಯಲಿದೆ.
ನ್ಯೂಜಿ಼ಲೆಂಡ್ ತಂಡ:
ಟಾಮ್ ಲೇಥಂ(ನಾಯಕ), ಫಿನ್ ಅಲೆನ್, (ODI 1), ಟಾಮ್ ಬ್ಲಂಡಲ್, ಚಾಡ್ ಬೌನ್ಸ್, ಮೈಕಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್(ODI 2 & 3), ಲಾಕ್ಕಿ ಫೆರ್ಗುಸನ್(ODI 1), ಮ್ಯಾಟ್ ಹೆನ್ರಿ, ಬೆನ್ ಲಿಸ್ಟರ್(ODI 2 & 3), ಡೆರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, (ODI 2 & 3), ಗ್ಲೆನ್ ಫಿಲಿಪ್ಸ್(ODI 1), ಹೆನ್ರಿ ಶಿಪ್ಲೆ, ಇಶ್ ಸೋಧಿ, ಬ್ಲೇರ್ ಟಿಕ್ನರ್, ವಿಲ್ ಯಂಗ್.
NZ ODI Team, Sri Lanka, New Zealand, ODI Series, Sports Karnataka