ಏಕದಿನ ಸರಣಿಯಲ್ಲೂ 2 ಪಂದ್ಯಗಳನ್ನು ಸತತವಾಗಿ ಗೆದ್ದ ಟೀಮ್ ಇಂಡಿಯಾ 3ನೇ ಪಂದ್ಯದ ಹೊತ್ತಿಗೆ ಪ್ರಯೋಗದ ಬಗ್ಗೆ ಮಾತನಾಡಿತ್ತು. ಈಗ ಟಿ20 ಸರಣಿಯಲ್ಲೂ ಕಥೆ ಬದಲಾಗಿಲ್ಲ. 3 ಪಂದ್ಯಗಳ ಟಿ20 ಸರಣಿಯ ಮೊದಲ 2 ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ ಈಗ ಸರಣಿ ಗೆದ್ದಿದೆ. ಉಳಿದಿರುವುದು ವೈಟ್ ವಾಷ್ ಕುತೂಹಲ. ವೆಸ್ಟ್ಇಂಡೀಸ್ಗೆ ಮಾನ ಉಳಿಸಿಕೊಳ್ಳುವ ಹಂಬಲ.
ಮೊದಲ ಟಿ20 ಪಂದ್ಯವನ್ನು ಟೀಮ್ ಇಂಡಿಯಾ 6 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. 157 ರನ್ಗಳ ಗುರಿಯನ್ನು ಟೀಮ್ ಇಂಡಿಯಾ ಸುಲಭವಾಗಿ ತಲುಪು ಮುನ್ನಡೆ ಸಾಧಿಸಿತ್ತು.
2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 186 ರನ್ಗಳಿಸಿತ್ತು. ಗೆಲುವಿಗಾಗಿ ಹೋರಾಟ ಮಾಡಿದ ವೆಸ್ಟ್ಇಂಡೀಸ್ 178 ರನ್ಗಳಿಸಿ 8 ರನ್ಗಳಿಂದ ಹಿಂದೆ ಬಿತ್ತು. ಸರಣಿಯನ್ನು 2-0 ಯಿಂದ ಕಳೆದುಕೊಂಡಿತು.
ಈಗ 3ನೇ ಚುಟುಕು ಪಂದ್ಯ ಭಾನುವಾರ ನಡೆಯಲಿದೆ. ಇಲ್ಲಿ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಕನಸು ಕಾಣುತ್ತಿದೆ. ವೆಸ್ಟ್ಇಂಡೀಸ್ ಮರ್ಯಾದೆ ಉಳಿಸಿಕೊಳ್ಳುವ ಪಣ ತೊಟ್ಟಿದೆ. ಒಂದು ವೇಳೆ ಈ ಪಂದ್ಯವನ್ನೂ ಸೋತರೆ ವಿಂಡೀಸ್ ಭಾರತ ಪ್ರವಾಸದಲ್ಲಿ ಒಂದೂ ಪಂದ್ಯ ಗೆಲ್ಲದೆ ತವರಿಗೆ ಹೋಗಬೇಕಾದ ಸ್ಥಿತಿಗೆ ಬರಲಿದೆ