ವೆಸ್ಟ್ ಇಂಡೀಸ್ ಮೇ 31 ರಿಂದ ಆರಂಭವಾಗುವ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಹೊಸ ನಾಯಕ ನಿಕೊಲಸ್ ಪೂರನ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ತಂಡ ಮುನ್ನಡೆಸಲಿದ್ದಾರೆ. ಆದರೆ ಮೊದಲ ಸರಣಿಯಲ್ಲೇ ಪೂರನ್ ಆಲ್ ರೌಂಡರ್ ಜೇಸನ್ ಹೋಲ್ಡರ್, ಬ್ಯಾಟರ್ ಗಳಾದ ಶಿಮ್ರನ್ ಹೆಟ್ಮಯರ್ ಮತ್ತು ಎವಿನ್ ಲೆವಿಸ್ ಸೇವೆಯನ್ನು ಕಳೆದುಕೊಳ್ಳಲಿದ್ದಾರೆ. ಜೇಡನ್ ಸೀಲ್ಸ್, ಶರ್ಮನ್ ಲೆವಿಸ್ ಮತ್ತು ಕೇಸಿ ಕಾರ್ಟಿ ಹೊಸದಾಗಿ ತಂಡ ಸೇರಿಕೊಳ್ಳಲಿದ್ದಾರೆ.
ಓಡಿಐ ಸೂಪರ್ ಲೀಗ್ ಚಾಂಪಿಯನ್ ಶಿಪ್ ನ ಈ ಸರಣಿಯಲ್ಲಿ ವಿಂಡೀಸ್ ನೆದರ್ಲೆಂಡ್ ಮತ್ತು ಪಾಕ್ ವಿರುದ್ಧ ತಲಾ 3 ಏಕದಿನ ಪಂದ್ಯಗಳನ್ನು ಆಡಲಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಶಿಮ್ರನ್ ಹೆಟ್ಮಯರ್ ಗೆ ವಿಂಡೀಸ್ ಕ್ರಿಕೆಟ್ ಬೋರ್ಡ್ ರಜೆ ನೀಡಿದೆ. ಜೇಸನ್ ಹೋಲ್ಡರ್ ಗೆ ವಿರಾಮ ನೀಡಲಾಗಿದೆ. ಆದರೆ ಎವಿನ್ ಲೆವಿಸ್ ವಿಂಡೀಸ್ ಕ್ರಿಕೆಟ್ ಬೋರ್ಡ್ ನಿಗದಿ ಮಾಡಿರುವ ಫಿಟ್ ನೆಸ್ ಪರೀಕ್ಷೆಯಲ್ಲಿ ಪಾಸ್ ಆಗದೇ ಇರುವ ಕಾರಣ ತಂಡದಿಂದ ಹೊರಗಿಡಲಾಘಿದೆ.
ಜೇಡನ್ ಸೀಲ್ಸ್ ಮತ್ತು ಶರ್ಮನ್ ಲೆವಿಸ್ ಗೆ ಇದು ಮೊದಲ ಏಕದಿನ ಸರಣಿಯಾಗಲಿದೆ. ಕಾರ್ಟಿ ಕೂಡ ತಂಡಕ್ಕೆ ಹೊಸ ಸೇರ್ಪಡೆಯಾಗಲಿದ್ದಾರೆ. ನೆದರ್ಲೆಂಡ್ ವಿರುದ್ಧದ ಪಂದ್ಯ ಆಮಸ್ಟಲ್ ವ್ಹೀಲ್ ನಲ್ಲಿ ಮೇ 31, ಜೂನ್ 2 ಮತ್ತು ಜೂನ್ 4 ರಂದು ನಡೆಯಲಿದೆ. ಪಾಕಿಸ್ತಾನ ವಿರುದ್ಧದ ಸರಣಿ ಜೂನ್ 8, ಜೂನ್ 10 ಮತ್ತು ಜೂನ್ 12 ರಂದು ರಾವಲ್ಪಿಂಡಿಯಲ್ಲಿ ನಡೆಯಲಿದೆ.