ವೆಸ್ಟ್ಇಂಡೀಸ್ ಕ್ರಿಕೆಟ್ ತಂಡಕ್ಕೆ ಹೊಸ ನಾಯಕನ ಆಯ್ಕೆಯಾಗಿದೆ. ಆಲ್ ರೌಂಡರ್ ಕೈರಾನ್ ಪೊಲ್ಲಾರ್ಡ್ ನಿವೃತ್ತಿಯಾಗಿರುವ ಹಿನ್ನಲೆಯಲ್ಲಿ ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ನಿಕೊಲಸ್ ಪೂರನ್ ತಂಡವನ್ನು ಮುನ್ನಡೆಸಲಿದ್ದಾರೆ. ಮತ್ತೊಬ್ಬ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಶಾಯ್ ಹೋಪ್ ಉಪನಾಯಕನಾಗಿ ತಂಡ ಮುನ್ನಡೆಸಲಿದ್ದಾರೆ.

2016ರಲ್ಲಿ ಟಿ20 ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಪೂರನ್ ಏಕದಿನ ಮತ್ತು ಟಿ20 ಪಂದ್ಯಗಳು ಸೇರಿದಂತೆ 94 ಪಂದ್ಯಗಳನ್ನು ಆಡಿದ್ದಾರೆ. ಟಿ20 ಕ್ರಿಕೆಟ್ನಲ್ಲಂತೂ ಪೂರನ್ ಸೂಪರ್ ಸಕ್ಸಸ್ ಕಂಡಿದ್ದಾರೆ. ಮೇ 31ರಿಂದ ಆರಮಭವಾಗುವ ನೆದರ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪೂರನ್ ಪೂರ್ಣ ಪ್ರಮಾಣ ನಾಯಕನಾಗಿ ಮೊದಲ ಸರಣಿ ಆಡಲಿದ್ದಾರೆ.