ಆಸ್ಟ್ರೇಲಿಯಾದ ಆಟಗಾರ ನಿಕ್ ಕಿರ್ಗಿಯೋಸ್ ವಿಂಬಲ್ಡನ್ ಟೆನಿಸ್ ಗ್ರ್ಯಾಂಡ್ ಸ್ಲಾಮ್‌ನ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸಿದ ಸಂದರ್ಭದಲ್ಲಿ ಆಟದ ಮನೋಭಾವಕ್ಕೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ 10,000 ಡಾಲರ್ ದಂಡವನ್ನು ವಿಧಿಸಲಾಗಿದೆ.
ಇದು ಈವರೆಗೆ ಟೂರ್ನಿಯಲ್ಲಿ ಘೋಷಿಸಲಾದ ದೊಡ್ಡ ಮೊತ್ತದ ದಂಡವಾಗಿದೆ. ಮೊದಲ ಸುತ್ತಿನ ಪಂದ್ಯದ ನಂತರ ಆಸೀಸ್ ಆಟಗಾರ ಕಿರ್ಗಿಯೋಸ್ ಅವರು ಸತಾಯಿಸುತ್ತಿದ್ದ ಪ್ರೇಕ್ಷಕರ ಮೇಲೆ ಉಗುಳಿದರು ಎಂದು ಒಪ್ಪಿಕೊಂಡಿದ್ದಾರೆ.
ಗುರುವಾರ, ಆಲ್ ಇಂಗ್ಲೆಂಡ್ ಕ್ಲಬ್ ಪಂದ್ಯದ ಸಮಯದಲ್ಲಿ ವಿಧಿಸಲಾದ ದಂಡವನ್ನು ಪ್ರಕಟಿಸಿದೆ. ಅರ್ಹತಾ ಪಂದ್ಯದಲ್ಲಿ ಮೊದಲ ಸುತ್ತಿನ ಪಂದ್ಯದ ಸಂದರ್ಭದಲ್ಲಿ ಆಟದ ಉತ್ಸಾಹಕ್ಕೆ ವಿರುದ್ಧವಾಗಿ ವರ್ತಿಸಿದ್ದಕ್ಕಾಗಿ ಅಲೆಕ್ಸಾಂಡರ್ ರಿಟ್‌ಚಾರ್ಡ್‌ಗೆ 5,000 ಡಾಲರ್ ದಂಡ ವಿಧಿಸಲಾಗಿತ್ತು.
ಆಟದ ಮನೋಭಾವಕ್ಕೆ ವಿರುದ್ಧವಾಗಿ ಅಥವಾ ಅಶ್ಲೀಲ ಪದಗಳನ್ನು ಬಳಸಿದ ಏಳು ಇತರ ಆಟಗಾರರಿಗೆ ತಲಾ ಮೂರು ಸಾವಿರ ಡಾಲರ್ ದಂಡ ವಿಧಿಸಲಾಗಿದೆ. ಒಟ್ಟು ಐವರು ಮಹಿಳಾ ಆಟಗಾರ್ತಿಯರಿಗೆ ದಂಡ ವಿಧಿಸಲಾಗಿದೆ.
ಎರಡನೇ ಸುತ್ತಿನ ಪಂದ್ಯದಲ್ಲಿ ನಿಕ್ ಕಿರ್ಗಿಯೋಸ್ 6-2, 6-3, 6-1 ರಿಂದ ಸೆರ್ಬಿಯಾದ ಫಿಲಿಪ್ ಕ್ರಾಜಿನೋವಿಕ್ ಅವರನ್ನು ಮಣಿಸಿ ಮೂರನೇ ಸುತ್ತು ಪ್ರವೇಶಿದರು.