India Vs England – ಆಂಗ್ಲರ ವಿರುದ್ಧ ಮತ್ತೊಂದು ಸಾಧನೆಯ ಮೇಲೆ ವಿರಾಟ್ ಚಿತ್ತ..!

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಅಗ್ನಿಪರೀಕ್ಷೆ ಆಗಲಿದೆ.
ಶತಕದ ಬರದ ಜೊತೆ ರನ್ ಬರವನ್ನು ಎದುರಿಸುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಹಳೆಯ ಲಯವನ್ನು ಕಂಡುಕೊಳ್ಳುತ್ತಾರಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ.
ಈಗಾಗಲೇ ಅಭ್ಯಾಸ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿಯ ಮೇಲೆ ನಿರೀಕ್ಷೆಗಳ ಭಾರವೇ ಇದೆ.
ಕೊಹ್ಲಿ ಅಭಿಮಾನಿಗಳು ಶತಕದ ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ. ಮತ್ತೊಂದು ಕಡೆ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರು, ವಿರಾಟ್ ಬ್ಯಾಟ್ ನಿಂದ ಮ್ಯಾಚ್ ವಿನ್ನಿಂಗ್ ಆಟವನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ನೆಲದಲ್ಲಿ ತನ್ನ ಹಳೆಯ ಖದರನ್ನು ತೋರಿಸಬೇಕಿದೆ. India Vs England -Can Kohli Match Sunny, Sachin Vs England?

ಈ ನಡುವೆ, ವಿರಾಟ್ ಕೊಹ್ಲಿ ಈ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಸಾಧನೆಯನ್ನು ಮಾಡಲಿದ್ದಾರೆ. ಇಂಗ್ಲೆಂಡ್ ವಿರುದ್ದ ಟೆಸ್ಟ್ ಕ್ರಿಕೆಟ್ ನಲ್ಲಿ 2ಸಾವಿರ ರನ್ ದಾಖಲಿಸಿದ್ದ ಭಾರತದ ಮೂರನೇ ಬ್ಯಾಟ್ಸ್ ಮೆನ್ ಆಗಿಯೂ ಹೊರಹೊಮ್ಮಲಿದ್ದಾರೆ. ಅಂದ ಹಾಗೇ ವಿರಾಟ್ ಕೊಹ್ಲಿಗೆ ಈ ಸಾಧನೆ ಮಾಡಲು ಬೇಕಾಗಿರುವುದು ಕೇವಲ 40 ರನ್ ಮಾತ್ರ.
ಈಗಾಗಲೇ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 27 ಟೆಸ್ಟ್ ಪಂದ್ಯಗಳಲ್ಲಿ 48 ಇನಿಂಗ್ಸ್ ಗಳನ್ನು ಆಡಿದ್ದಾರೆ. ಅಲ್ಲದೆ 1960 ರನ್ ಕೂಡ ದಾಖಲಿಸಿದ್ದಾರೆ.
ಈ ಹಿಂದೆ ಸುನೀಲ್ ಗವಾಸ್ಕರ್ ಅವರು 47 ಇನಿಂಗ್ಸ್ ಗಳಲ್ಲಿ 2ಸಾವಿರ ರನ್ ಗಳಿಸಿದ್ರೆ, ಸಚಿನ್ ತೆಂಡುಲ್ಕರ್ 36 ಇನಿಂಗ್ಸ್ ಗಳಲ್ಲಿ 2 ಸಾವಿರ ರನ್ ಪೂರೈಸಿದ್ದಾರೆ.
1932ರಿಂದ ಇಲ್ಲಿಯವರೆಗೆ ಭಾರತ ಮತ್ತು ಇಂಗ್ಲೆಂಡ್ 122 ಟೆಸ್ಟ್ ಪಂದ್ಯಗಳನ್ನು ಆಡಿದೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿಯವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲದೆ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳುತ್ತಾರೆ ಅನ್ನೋ ನಂಬಿಕೆಯೂ ಇದೆ.