ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ನೆದರ್ಲೆಂಡ್ ಬೌಲರ್ಗಳ ದಾಳಿಗೆ ಸಿಲುಕಿ ಅನಿರೀಕ್ಷಿತ ಕುಸಿತ ಕಂಡಿತು. ಮಾರ್ಟಿನ್ ಗಪ್ಟಿಲ್ (6), ವಿಲ್ ಯಂಗ್ (1), ಹೆನ್ರಿ ನಿಕೊಲಸ್ (19) ರಾಸ್ ಟೇಲರ್ (1) ಮತ್ತು ಮೈಕಲ್ ಬ್ರೇಸ್ವೆಲ್ ಔಟಾದಾಗ ಸ್ಕೋರ್ ಕೇವಲ 35 ರನ್.
ನಾಯಕ ಟಾಮ್ ಲೇಥಮ್ ಜೊತೆ ಕಾಲಿನ್ ಡಿ ಗ್ರಾಂಡ್ಹೋಮ್ ಸಣ್ಣ ಜೊತೆಯಾಟ ಕಟ್ಟಿದರು. ಆದರೆ ತಂಡದ ಮೊತ್ತ 89 ರನ್ಗಳಾಗಿದ್ದಾಗ ಕಾಲಿನ್ ಡಿ ಗ್ರಾಂಡ್ಹೋಮ್ (16) ಕೂಡ ಔಟಾದರು. ಸಂಕಷ್ಟದಲ್ಲಿದಾಗ ಲೇಥಮ್ ಜೊತೆಯಾಗಿದ್ದು ಡಗ್ ಬ್ರೇಸ್ ವೆಲ್. ಈ ಜೋಡಿ 90 ರನ್ಗಳ ಜೊತೆಯಾಟ ಆಡಿ ತಂಡವನ್ನು ಕಾಪಾಡಿತು. ಡಗ್ ಬ್ರೇಸ್ ವೆಲ್ 41 ರನ್ಗಳಿಸಿ ನಿರ್ಗಮಿಸಿದರು. ಬಾಲಂಗೋಚಿಗಳ ಜೊತೆ ಸೇರಿಕೊಂಡು ಲೇಥಮ್ ಉತ್ತಮ ಮೊತ್ತ ಕಲೆ ಹಾಕಿದರು. ಲೇಥಮ್ ಅಜೇಯ ಶತಕ ಸಂಭ್ರಮ ಆಚರಿಸಿಕೊಂಡಿದ್ದಲ್ದೆ 140 ರನ್ಗಳಿಸಿ ಮಿಂಚಿದರು. ಕಿವೀಸ್ 50 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್ಗಳಿಸಿತು.
ಚೇಸಿಂಗ್ನಲ್ಲಿ ನೆದರ್ಲೆಂಡ್ ಕಡೆಯಿಂದ ಹೋರಾಟವೇ ಬರಲಿಲ್ಲ. ವಿಕ್ರಮಜಿತ್ ಸಿಂಗ್ (31) ಮತ್ತು ಬಾಸ್ ಡಿ ಲೀಡ್ (37) ಮತ್ತು ಮೈಕಲ್ ರಿಪ್ಪನ್ (18) ಮಾತ್ರ ಎರಂಡಕಿ ದಾಟಿದರು. ಉಳಿದವರು ಕ್ರೀಸ್ಗೆ ಬಂದು ಹೋಗುವ ಕೆಲಸ ಮಾಡಿದರು. ಇತರೆ ರನ್ಗಳ ಪಾಲು 16 ಇತ್ತು ನೆದರ್ಲೆಂಡ್ 34.1 ಓವರುಗಳಲ್ಲಿ 146 ರನ್ಗಳಿಗೆ ಆಲೌಟ್ ಆಯಿತು. ಮೈಕಲ್ ಬ್ರೇಸ್ವೆಲ್ 3 ವಿಕೆಟ್ ಪಡೆದು ಮಿಂಚಿದರು. ನ್ಯೂಜಿಲೆಂಡ್ 118 ರನ್ಗಳ ಭರ್ಜರಿ ಜಯ ದಾಖಲಿಸಿತು.