ನ್ಯೂಜಿಲೆಂಡ್ (Newzealand) ತಂಡ ಐರ್ಲೆಂಡ್ (Ireland) ಪ್ರವಾಸದಲ್ಲಿದೆ. ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಆಟಗಾರರಿಗೆ ಸರಿಯಾದ ಅಭ್ಯಾಸ ಸಿಗಲಿ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ಪ್ಲಾನ್ ಮಾಡಿಕೊಂಡಿದೆ. ಆದರೆ ಯುರೋಪ್ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ತಂಡ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರೀಮಿಯರ್ ಬೌಲರ್ ಆಡಂ ಮಿಲ್ನೆ (Adam Milne) ಗಾಯಕ್ಕೆ ತುತ್ತಾಗಿ ತಂಡದಂದ ಹೊರ ಬಿದ್ದಿದ್ದಾರೆ.
ಮಿಲ್ನೆ ಅಭ್ಯಾಸದ ವೇಳೆ ನೋವಿನಿಂದ ನರಳುತ್ತಿದ್ದಾರೆ. ಹತ್ತಿರದ ಕ್ರೀಡಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಹಿಮ್ಮಡಿ ಗಾಯಕ್ಕೆ ಒಳಗಾಗಿರುವುದು ಪತ್ತೆಯಾಗಿದೆ. ಮಿಲ್ನೆ ಕಿವೀಸ್ ತಂಡದ ಸ್ಟಾರ್ ಬೌಲರ್ ಆಗಿದ್ದು ಮುಂದಿನ ಟಿ20 ವಿಶ್ವಕಪ್ ವೇಳೆ ಪ್ರಮುಖ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ. ಮಿಲ್ನೆಗೆ ಆಗಿರುವ ಗಾಯದ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಸ ತಲೆ ಕೆಡಿಸಿಕೊಂಡಿದ್ದು, ನೆದರ್ಲೆಂಡ್ ವಿರುದ್ಧ 2 ಟಿ20 ಪಂದ್ಯಗಳನ್ನು ಆಡುವ ಸಾಧ್ಯತೆ ಇದೆ. ಆಗಸ್ಟ್‌ನಲ್ಲಿ ಈ ಸರಣಿ ನಡೆಯುತ್ತಿರುವುದರಿಂದ ಮಿಲ್ನೆ ಫಿಟ್ ಆಗಬಹುದು ಅನ್ನುವ ನಿರೀಕ್ಷೆ ಇದೆ.

ಆಗಸ್ಟ್‌ನಲ್ಲಿ ನ್ಯೂಜಿಲೆಂಡ್ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದ್ದು ಅಲ್ಲಿ 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನು ಆಡಲಿದೆ. ಆದರೆ ಪದೇ ಪದೇ ಗಾಯಗೊಳ್ಳುತ್ತಿರುವ ಮಿಲ್ನೆ ಬಗ್ಗೆ ತಂಡ ಹೆಚ್ಚು ಚಿಂತೆ ಹೊಂದಿದೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ವೇಳೆಯೂ ಮಿಲ್ನೆ ಗಾಯಗೊಂಡು ತಂಡ ತೊರೆದಿದ್ದರು.