ಐಸಿಸಿ ಮಹಿಳಾ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಸೋತಿದ್ದ ಫೆವರೀಟ್ ನ್ಯೂಜಿಲೆಂಡ್ 2ನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿದಿದೆ. ಬಾಂಗ್ಲಾದೇಶ ವಿರುದ್ಧ ಭರ್ಜರಿ 9 ವಿಕೆಟ್ಗಳ ಜಯ ದಾಖಲಿಸಿದ ಕಿವೀಸ್ ವನಿತೆಯರು ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಫಾರ್ಮ್ ಕಂಡುಕೊಂಡಿದ್ದಾರೆ.
ಡ್ಯುನೆಡಿನ್ನಲ್ಲಿ ಮಳೆ ಹಾಗೂ ಒದ್ದೆ ಔಟ್ ಫೀಲ್ಡ್ ಕಾರಣದಿಂದ ಪಂದ್ಯ ತಡವಾಗಿ ಆರಂಭಗೊಂಡಿತ್ತು. ಹೀಗಾಗಿ 27 ಓವರುಗಳ ಪಂದ್ಯ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ಶಮಿಮಾ ಸುಲ್ತಾನ (33) ಮತ್ತು ಫರ್ಗಾನಾ ಹಕ್ (52) ಉತ್ತಮ ಆರಂಭ ತಂದುಕೊಟ್ಟರು. ಆದರೆ ಆ್ಯಮಿ ಸೆಟರ್ ವೆಟ್ 3 ವಿಕೆಟ್ ಪಡೆದು ಬಾಂಗ್ಲಾ ಇನ್ನಿಂಗ್ಸ್ಗೆ ಕಡಿವಾಣ ಹಾಕಿದರು. ಮೂವರು ಆಟಗಾರ್ತಿಯರು ರನೌಟ್ ಬಲೆಯಲ್ಲಿ ಬಿದ್ದರು. ನಿಗದಿತ 27 ಓವರುಗಳಲ್ಲಿ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 140 ರನ್ ಗಳಿಸಿತು.
ಟಾರ್ಗೆಟ್ ಬೆನ್ನು ಹತ್ತಿದ ಕಿವೀಸ್ 20 ಓವರುಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ನಾಯಕಿ ಸೋಫಿ ಡಿವೈನ್ 14 ರನ್ ಗಳಿಸಿ ಔಟಾದರು. ಆದರೆ ಸೂಜಿ ಬೇಟ್ಸ್ 69 ಎಸೆತಗಳಲ್ಲಿ ಅಜೇಯ 79 ರನ್ಗಳಿಸಿರು. ಅಮೆಲಿಯ ಕೆರ್ 37 ಎಸೆತಗಳಲ್ಲಿ ಅಜೇಯ 47 ರನ್ಗಳಿಸಿ ಮಿಂಚಿದರು.
ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಭಾರತಕ್ಕೆ ಫಾರ್ಮ್ ಗೆ ಮರಳಿರುವ ಬಗ್ಗೆ ವಾರ್ನಿಂಗ್ ರವಾನಿಸಿದೆ. ಭಾರತ ಮಾರ್ಚ್ 9 ಎಂದು ಕಿವೀಸ್ ವಿರುದ್ಧ 2ನೇ ತನ್ನ 2ನೇ ಪಂದ್ಯ ಆಡಲಿದೆ.