ಹಾಕಿ ದಂತಕಥೆ, ಮೇಜರ್ ಧ್ಯಾನ್ಚಂದ್ (Major Dhyan Chand) ನೆನಪಿನ ಅಂಗವಾಗಿ ರಾಷ್ಟ್ರೀಯ ಕ್ರೀಡಾದಿನವನ್ನು (National Sports Day) ಆಚರಿಸಲಾಗುತ್ತಿದೆ. ಭಾರತೀಯ ಕ್ರೀಡಾಲೋಕವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಖ್ಯಾತಿ ಧ್ಯಾನ್ಚಂದ್ ಅವರದ್ದು. ಫೀಲ್ಡ್ ಹಾಕಿಯಲ್ಲಂತೂ ಧ್ಯಾನ್ ಚಂದ್ ನಿಜಕ್ಕೂ ಮಾಂತ್ರಿಕ ಆಟವನ್ನೇ ಆಡಿದ್ದರು.
ಭಾರತೀಯ ಕ್ರೀಡಾ ಇತಿಹಾಸವನ್ನು ಮತ್ತು ಆಟಗಾರರನ್ನು ಬಿಂಬಿಸುವ ಹಲವು ಚಿತ್ರಗಳು ತೆರೆ ಮೇಲೆ ಬಂದಿವೆ. ಬಾಲಿವುಡ್ನ ಈ ಪ್ರಯೋಗ ದೊಡ್ಡ ರಿಸಲ್ಟ್ ತಂದುಕೊಡದೇ ಇದ್ದರೂ ಒಳ್ಳೆಯ ಹೆಸರನ್ನು ಪಡೆದುಕೊಂಡಿವೆ. ಕ್ರೀಡಾ ಲೋಕ ಹಾಗೂ ಕ್ರೀಡಾಪಟುಗಳಿಗೆ ಸಂಬಂಧಿಸಿದ ಹಲವು ಚಿತ್ರಗಳು ತೆರೆಗೆ ಬಂದಿದ್ದರೂ 5 ಚಿತ್ರಗಳು ಕ್ರೀಡಾಭಿಮಾನಿಗಳ ಮನಸ್ಸನ್ನು ೫ ಚಿತ್ರಗಳು ಹೆಚ್ಚಾಗಿ ಗೆದ್ದಿವೆ.
• 83
ಭಾರತ ಕ್ರಿಕೆಟ್ನಲ್ಲಿ ಇಟ್ಟ ಮೊದಲ ಹೆಜ್ಜೆಯಿದು. ಕ್ರಿಕೆಟ್ ಲೋಕವನ್ನು ಕಪಿಲ್ಸ್ ಡೆವಿಲ್ಸ್ ತನ್ನತ್ತ ತಿರುಗಿಸಿತ್ತು. ಚಾಂಪಿಯನ್ ವೆಸ್ಟ್ಇಂಡೀಸ್ ತಂಡವನ್ನೇ ಸೋಲಿಸಿ ಲಾರ್ಡ್ಸ್ ಬಾಲ್ಕನಿಯಲ್ಲಿ 1983ರ ಏಕದಿನ ವಿಶ್ವಕಪ್ ಗೆದ್ದಿತ್ತು. ಈ ಕಥೆ ಹೊಂದಿರುವ ಸಿನಿಮಾದಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆಯಂತಹ ಖ್ಯಾತ ನಟರು ಅಭಿನಯಿಸಿದ್ದಾರೆ.
• ದಂಗಲ್
ಆಮಿರ್ ಖಾನ್ ನಟನೆಯ ಈ ಸಿನಿಮಾ ಕುಸ್ತಿಪಟು, ಒಲಿಂಪಿಕ್ ಕೋಚ್ ಮಹಾವೀರ್ ಸಿಂಗ್ ಪೊಗಟ್ ಅವರ ಜೀವನ ಕಥೆ. ತನ್ನಿಬ್ಬರು ಮಕ್ಕಳಾದ ಸವಿತಾ ಮತ್ತು ಬಬಿತಾ ಅವರನ್ನು ಕುಸ್ತಿ ಪಟುಗಳನ್ನಾಗಿ ಮಾಡುವ ಸಾಹಸಮಯ ಕಥೆ ಇದಾಗಿದೆ.
• ಮೇರಿ ಕೋಮ್
ಬಾಕ್ಸರ್ ಮೇರಿಕೋಮ್ ಕಥೆ ನಿಜಕ್ಕೂ ಅದ್ಭುತ. ಪ್ರಿಯಾಂಕಾ ಚೋಪ್ರಾ ನಟನೆಯೇ ಈ ಚಿತ್ರಕ್ಕೆ ಬೋನಸ್ ಆಗಿತ್ತು. ಬಾಕ್ಸಿಂಗ್ಗಾಗಿಸ ಮೇರಿಕೋಮ್ ಪಟ್ಟ ಸಂಕಷ್ಟ, ಅನುಭವಿಸಿದ ಅವಮಾನ ಜೊತೆಗೆ ತಾಯಿಯಾದ ಮೇಲೆ ವಿಶ್ವ ಚಾಂಪಿಯನ್ ಆಗಿದ್ದು ಎಲ್ಲವೂ ಸಾಹಸದ ಹಿಂದಿನ ಕಥೆಯಾಗಿತ್ತು. ಮೇರಿಕೋಮ್ ಈ ಚಿತ್ರದ ಮೂಲಕ ಮನೆ ಮಾತಾಗಿದ್ದರು.
• ಎಂಎಸ್ ಧೋನಿ: ಅನ್ಟೋಲ್ಡ್ ಸ್ಟೋರಿ (MS Dhoni)
ಜಾರ್ಖಂಡ್ನ ಚಿಕ್ಕ ಹಳ್ಳಿಯಿಂದ ಬಂದ ಮಾಹಿ ಟಿಕೆಟ್ ಕಲೆಕ್ಟರ್ ಆಗಿ, ಆ ಕೆಲಸ ಬಿಟ್ಟು ಕ್ರಿಕೆಟಿಗನಾದ ಕಥೆ ಇದು. ಮಾಹಿ ಜೀವನ ಮೈದಾನದಲ್ಲಿ ಧೋನಿ ಹಿಟ್ ಆಗಿದ್ದಂತೆ ಬೆಳ್ಳಿ ತೆರೆಯಲ್ಲೂ ಸೂಪರ್ ಹಿಟ್ ಆಗಿತ್ತು . ಈ ಸಿನಿಮಾ ೬೧ ದೇಶಗಳಲ್ಲಿ ತೆರೆಕಂಡಿತ್ತು.
• ಭಾಗ್ ಮಿಲ್ಕಾ ಭಾಗ್
ಖ್ಯಾತ ಅಥ್ಲೀಟ್ ಮಿಲ್ಕಾಸಿಂಗ್ ಜೀವನ ಕಥೆ ಈ ಚಿತ್ರದ ಮೂಲಕ ತೆರೆ ಕಂಡಿತ್ತು. ಭಾರತದ ಫ್ಲೈಯಿಂಗ್ ಸಿಖ್ ಎಂದು ಖ್ಯಾತಿ ಪಡೆದಿದ್ದ ಮಿಲ್ಕಾ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ನಲ್ಲಿ ಮಿಂಚಿದ್ದರು. ಒಲಿಂಪಿಕ್ಸ್ನಲ್ಲೂ ಮಿಲ್ಖಾ ಅದ್ಭುತ ಓಟವನ್ನು ಓಡಿದ್ದರು.