ಏಷ್ಯಾಕಪ್ (Asia Cup) ಹೋರಾಟದದಲ್ಲಿ ಟೀಮ್ ಇಂಡಿಯಾ (Team India) ಕಡುಬದ್ಧವೈರಿ ಪಾಕಿಸ್ತಾನ (Pakistan) ತಂಡವನ್ನು ರೋಚಕವಾಗಿ ಮಣಿಸಿದೆ. ಕೊನೆಯ ಓವರ್ ತನಕ ಸಾಗಿದ ಈ ಹೋರಾಟದಲ್ಲಿ ಪಟ್ಟು ಬಿಡದ ಭಾರತ (India) ಗೆಲುವಿನ ಸಂಭ್ರಮ ಆಚರಿಸಿಕೊಂಡಿದೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ಟಿ20 ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡಿದೆ. ರೋಹಿತ್ ಬಳಗದ ಗೆಲುವಿಗೆ ಹಲವು ಕಾರಣಗಳಿವೆ (Reasons).
• ಪ್ರಮುಖ ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ್ದು
ಭಾರತ ಟಾಸ್ ಗೆದ್ದಿದ್ದೇ ಮೊದಲ ಟರ್ನಿಂಗ್ ಪಾಯಿಂಟ್. ಡ್ಯೂ ಫ್ಯಾಕ್ಟರ್ ನಂಬಿಕೊಂಡು ಚೇಸಿಂಗ್ ಸುಲಭ ಅನ್ನುವ ಲೆಕ್ಕಾಚಾರ ಭಾರತದ್ದಾಗಿತ್ತು. ಆದರೆ ಡ್ಯೂ ಫ್ಯಾಕ್ಟರ್ ಬರಲೇ ಇಲ್ಲ. ಆದರೆ ಆರಂಭದಲ್ಲಿ ಪಿಚ್ನಿಂದ ಸಿಕ್ಕಿದ್ದ ಸ್ವಿಂಗ್ ಮತ್ತು ವೇಗ ಭಾರತಕ್ಕೆ ವರದಾನವಾಯಿತು. ಬೌನ್ಸರ್ಗಳು ಭಾರತಕ್ಕೆ ವಿಕೆಟ್ ತಂದುಕೊಟ್ಟವು.
• ಭುವಿ ಅದ್ಭುತ ಬೌಲಿಂಗ್
ಭುವನೇಶ್ವರ್ ಕುಮಾರ್ ಭಾರತದ ಬೌಲಿಂಗ್ ಲೀಡರ್, ಭುವಿ ಆರಂಬದಲ್ಲಿ ಬಾಬರ್ ವಿಕೆಟ್ ಕಿತ್ತರೆ, 16ನೇ ಓವರ್ನಲ್ಲಿ ಬಿಗ್ ಹಿಟ್ಟರ್ ಆಸೀಪ್ ಅಲಿಯನ್ನು ಪವೆಲಿಯನ್ಗೆ ಅಟ್ಟಿದರು. ಅದಾದ ಮೇಲೆ 18ನೇ ಓವರ್ನ್ಲ್ಲಿ ಬೆನ್ನು ಬೆನ್ನಿಗೆ 2 ವಿಕೆಟ್ ಕಬಳಿಸಿದರು.
• ಹಾರ್ದಿಕ್ ಪಾಂಡ್ಯ 15ನೇ ಓವರ್
ಸೆಟಲ್ ಆಗಿದ್ದ ರಿಜ್ವಾನ್ ಭಾರತಕ್ಕೆ ಚಳ್ಳೆ ಹಣ್ಣು ತಿನ್ನಿಸಲು ಪ್ಲಾನ್ ಮಾಡಿದ್ದರು. ಆದರೆ ಹಾರ್ದಿಕ್ 15ನೇ ಓವರ್ನಲ್ಲಿ ರಿಜ್ವಾನ್ ಮತ್ತು ಕುಶ್ದಿಲ್ ವಿಕೆಟ್ ಪಡೆದು ಪಾಕ್ ಹೋರಾಟಕ್ಕೆ ಕಡಿವಾಣ ಹಾಕಿದರು.
* ಭುವನೇಶ್ವರ್, ಹಾರ್ದಿಕ್ ಮತ್ತು ಜಡೇಜಾ – ಒಟ್ಟು 10 ಓವರ್ಗಳಲ್ಲಿ ಕೇವಲ 62 ರನ್ ನೀಡಿ 7 ವಿಕೆಟ್
ಈ ಬೌಲಿಂಗ್ ತುಂಬಾ ಪ್ರಮುಖವಾಗಿತ್ತು. ಈ ಮೂವರು ಒಟ್ಟು 10 ಓವರುಗಳ ಬೌಲಿಂಗ್ನಲ್ಲಿ ಕೇವಲ 67 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಅಷ್ಟೇ ಅಲ್ಲ 7 ವಿಕೆಟ್ ಪಡೆದುಕೊಂಡಿದ್ದರು. ಇದು ಪಾಕಿಸ್ತಾನಕ್ಕೆ ದೊಡ್ಡ ಹೊಡೆತ ನೀಡಿತು.
• ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಜೊತೆಯಾಟ
ರೋಹಿತ್ ಶರ್ಮಾ ಔಟಾದ ಮೇಲೆ ಸೂರ್ಯಕುಮಾರ್ ಯಾದವ್ ಆಟಕ್ಕಿಳಿಯಬಹುದು ಅನ್ನುವ ಲೆಕ್ಕಾಚಾರವಿತ್ತು. ಆದರೆ ಟೀಮ್ ಇಂಡಿಯಾ ನಾಯಕ ರೋಹಿತ್ ಜಡೇಜಾಗೆ ಅವಕಾಶ ಕೊಟ್ಟರು. ಲೆಗ್ಸ್ಪಿನ್ ಮತ್ತು ಎಡಗೈ ಸ್ಪಿನ್ ದಾಳಿಗೆ ಕೌಂಟರ್ ಕೊಟ್ರು. ಜಡೇಜಾ ಹಾರ್ದಿಕ್ ಜೊತೆ 52 ರನ್ಗಳ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು.
ಭಾರತದ ಈ ಸ್ಪಾಟ್ ಚೇಂಜ್ಗಳು ಕೊನೆಯಲ್ಲಿ ಗೆಲುವಿನ ಗಿಫ್ಟ್ ನೀಡಿತು. ರೋಹಿತ್ ಲೆಕ್ಕಾಚಾರ ಮತ್ತು ಕೋಚ್ ರಾಹುಲ್ ದ್ರಾವಿಡ್ ತಂತ್ರ ಕೈ ಹಿಡಿಯಿತು.