ಭಾರತ ಕ್ರಿಕೆಟ್ ತಂಡದ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಶ್ರೀಲಂಕಾ ವಿರುದ್ಧದ ಟಿ-20 ಮುಗಿದ ಬಳಿಕ ಐಪಿಎಲ್ ಗೆ ತಯಾರಿ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಯುಜುವೇಂದ್ರ ಗುರುವಾರ ಜೈಪುರ ತಲುಪಿದ್ದಾರೆ. ಇಲ್ಲಿ ಅವರು 3 ರಿಂದ 4 ದಿನಗಳ ಕ್ವಾರಂಟೈನ್ ಅವಧಿಯನ್ನು ಮುಗಿಸಿದ ನಂತರ ರಾಜಸ್ಥಾನ್ ರಾಯಲ್ಸ್ನ ಅಭ್ಯಾಸ ಸೆಷನ್ಗೆ ಸೇರುತ್ತಾರೆ. ಅಂದಹಾಗೆ ಇದಕ್ಕೂ ಮೊದಲು ಚಹಾಲ್ ತಮ್ಮ ಜೆರ್ಸಿ ನಂಬರ್ ಬಹಿರಂಗ ಪಡಿಸಿದ್ದಾರೆ.
ಚಹಾಲ್ ರಾಜಸ್ಥಾನ್ ರಾಯಲ್ಸ್ನ ಗುಲಾಬಿ ಟಿ-ಶರ್ಟ್ ಧರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ‘ಜಬ್ ವಿ ಮೆಟ್’ ಎಂದು ಬರೆಯಲಾಗಿದೆ. ಅದೇ ಸಮಯದಲ್ಲಿ, ಈ ಹಿಂದೆ ಚಹಾಲ್ ಅವರು ವಿಮಾನದಲ್ಲಿ ಕುಳಿತು ಜೈಪುರಕ್ಕೆ ಬರುವ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ರಾಜಸ್ಥಾನ ರಾಯಲ್ಸ್ ಪರ ಜೆರ್ಸಿ ನಂಬರ್ ಮೂರರಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಐಪಿಎಲ್ ಹರಾಜಿನ ವೇಳೆ ಯಜುವೇಂದ್ರ ಚಹಾಲ್ ಅವರನ್ನು ರಾಜಸ್ಥಾನ್ ರಾಯಲ್ಸ್ 6.5 ಕೋಟಿ ರೂ.ಗೆ ಖರೀದಿಸಿತ್ತು. ರಾಜಸ್ಥಾನ ರಾಯಲ್ಸ್ನ ಅಭ್ಯಾಸ ಅವಧಿಗೆ ಸೇರುವ ಮೊದಲು ಅವರು 3-5 ದಿನಗಳ ಕಾಲ ಕ್ವಾರಂಟೈನ್ನಲ್ಲಿರಬೇಕು.
ಯಜುವೇಂದ್ರ ಚಹಾಲ್ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯೊಂದಿಗೆ 2011 ರಲ್ಲಿ ತಮ್ಮ IPL ಪ್ರಯಾಣವನ್ನು ಪ್ರಾರಂಭಿಸಿದರು. ಈ ಸಮಯದಲ್ಲಿ ಅವರನ್ನು ಗುರುತಿಸಲಾಗಲಿಲ್ಲ. ಇದಾದ ನಂತರ ಯುಜುವೇಂದ್ರ ಚಹಾಲ್ 2014 ರಿಂದ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್ಸಿಬಿಯಲ್ಲಿ ಆಡಲು ಪ್ರಾರಂಭಿಸಿದರು. ಈಗ ಐಪಿಎಲ್ 2022 ರಲ್ಲಿ, ಚಹಾಲ್ ತನ್ನ ಮೂರನೇ ಫ್ರಾಂಚೈಸಿ ರಾಜಸ್ಥಾನಕ್ಕಾಗಿ ಆಡಲಿದ್ದಾರೆ. ಚಹಾಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 114 ಪಂದ್ಯಗಳಲ್ಲಿ 139 ವಿಕೆಟ್ ಪಡೆದಿದ್ದಾರೆ. ಈ ವೇಳೆ 25 ರನ್ಗಳಿಗೆ 4 ವಿಕೆಟ್ಗಳನ್ನು ಕಬಳಿಸಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.