ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಶತಕದ ಪಂದ್ಯದಲ್ಲಿ ಮಹತ್ವದ ಮೈಲುಗಲ್ಲು ತಲುಪಿದ್ದಾರೆ. ಈ ಪಂದ್ಯವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಬ್ಯಾಟ್ ಮಾಡುತ್ತಿರುವ ವಿರಾಟ್ ಟೆಸ್ಟ್ ಕ್ರಿಕೆಟ್ ನಲ್ಲಿ 8000 ರನ್ ಸೇರಿಸಿ ಸಾಧನೆ ಮಾಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಶುಕ್ರವಾರ ಆತ್ಮವಿಶ್ವಾಸದಿಂದಲೇ ಬ್ಯಾಟ್ ಮಾಡುತ್ತಿದ್ದಾರೆ. ಅವರು ಆರಂಭದಲ್ಲಿ ಬಾರಿಸಿದ ಸ್ಟ್ರೇಟ್ ಡ್ರೈವ್ ಅವರ ಆತ್ಮವಿಶ್ವಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವಿರಾಟ್ ಕೊಹ್ಲಿ ಪಂದ್ಯದ 39ನೇ ಓವರ್ ನಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶ್ವಾ ಫರ್ನಾಂಡೋ ಎಸೆದ ಎರಡನೇ ಎಸೆತವನ್ನು ಡೀಪ್ ಪಾಯಿಂಟ್ ಗೆ ತಳ್ಳಿ ಒಂದು ರನ್ ಕದಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ಡ್ರೆಸಿಂಗ್ ರೂಮ್ ನಲ್ಲಿ ಕುಳಿತಿದ್ದ ಸಹ ಆಟಗಾರರು ಚೇಸಿಂಗ್ ಸ್ಟಾರ್ ಸಾಧನೆಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
What a moment to commemorate his 100th Test appearance in whites 🙌🏻
Words of appreciation from the Head Coach Rahul Dravid and words of gratitude from @imVkohli👏🏻#VK100 | #INDvSL | @Paytm pic.twitter.com/zfX0ZIirdz
— BCCI (@BCCI) March 4, 2022
ಈಗಾಗಲೇ ಸುನಿಲ್ ಗವಾಸ್ಕರ್ (Sunil Gavaskar), ಸಚಿನ್ ತೆಂಡುಲ್ಕರ್(Sachin Tendulkar), ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid), ವಿರೇಂದ್ರ ಸೆಹ್ವಾಗ್ (Virender Sehwag) ಹಾಗೂ ವಿವಿಎಸ್ ಲಕ್ಷ್ಮಣ್ (VVS Laxman) ಭಾರತ ಪರ ಟೆಸ್ಟ್ ಕ್ರಿಕೆಟ್ನಲ್ಲಿ 8,000+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.