ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಎರಡು ಅತ್ಯಂತ ಯಶಸ್ವಿ ತಂಡ. ಈ ಎರಡು ತಂಡಗಳು 14 ಪ್ರಶಸ್ತಿಗಳಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿವೆ. ಆದರೆ ಈ ಋತುವಿನಲ್ಲಿ ಎರಡೂ ತಂಡಗಳ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ.
ಮುಂಬೈ ಆರಂಭಿಕ ಆಟಗಾರ ಇಶಾನ್ ಕಿಶನ್ ಎರಡು ಅರ್ಧಶತಕ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ತಿಲಕ್ ವರ್ಮಾ ಮತ್ತು ಡೆವಾಲ್ಡ್ ಬ್ರೆವಿಸ್ ಕೂಡ ಪ್ರಭಾವ ಬೀರಿದ್ದಾರೆ. ಪೊಲಾರ್ಡ್ ಕೋಲ್ಕತ್ತಾ ವಿರುದ್ಧವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು ಆದರೆ ತಂಡದ ವೇಗದ ಬೌಲರ್ಗಳು ಬಿಗುವಿನ ದಾಳಿ ನಡೆಸಲು ಸಾಧ್ಯವಾಗಲಿಲ್ಲ.
ಮುಂಬೈನ ಶಕ್ತಿ ವೇಗದ ಬೌಲಿಂಗ್
ಐಪಿಎಲ್ನ ಮೊದಲ ಸೀಸನ್ನಿಂದ ಮುಂಬೈ ತಂಡದಲ್ಲಿ ಪ್ರಭಾವಿ ವೇಗದ ಬೌಲರ್ ಗಳು ಇದ್ದರು. ಲಸಿತ್ ಮಾಲಿಂಗರಿಂದ ಹಿಡಿದು ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ವರವರೆಗೂ, ಬೌಲರ್ಗಳು ವಿಕೆಟ್ಗಳನ್ನು ಪಡೆದು ರನ್ ಗಳಿಗೆ ಕಡಿವಾಣ ಹಾಕುತ್ತಿದ್ದರು. ಆದರೆ ಈಗ ಈ ಚಿತ್ರಣ ಬದಲಾಗಿದೆ. ಮಾಲಿಂಗ ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಬೌಲ್ಟ್ ಈಗ ರಾಜಸ್ಥಾನ ಪರ ಆಡುತ್ತಿದ್ದು, ಬುಮ್ರಾಗೆ ಉಳಿದ ಬೌಲರ್ಗಳಿಂದ ಬೆಂಬಲ ಸಿಗುತ್ತಿಲ್ಲ. ಈ ಋತುವಿನಲ್ಲಿ ಮುಂಬೈ ಬೌಲರ್ಗಳು ಪ್ರತಿ ಓವರ್ನಲ್ಲಿ 10ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಮುಂಬೈನ ಕಳಪೆ ಪ್ರದರ್ಶನಕ್ಕೆ ಇದೇ ದೊಡ್ಡ ಕಾರಣ.
![ಮುಂಬೈ ಸೋಲಿಗೆ ಏನು ಕಾರಣ? ಇಲ್ಲಿದೆ ಕಂಪ್ಲೀಟ್ ಡಿಟೇಲ್ 4 BOULT 1](http://sportskarnataka.com/wp-content/uploads/2022/04/BOULT-1.webp)
ಎಲ್ಲಾ ತಂಡಗಳ ವೇಗದ ಬೌಲರ್ಗಳಿಗೆ ಹೋಲಿಸಿದರೆ ಮುಂಬೈನ ವೇಗದ ಬೌಲರ್ಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಮುಂಬೈ ನಂತರದ ಅತ್ಯಂತ ಕೆಟ್ಟ ಏಕನಾಮಿ ಪಂಜಾಬ್ ಕಿಂಗ್ಸ್ ಬೌಲರ್ಗಳದ್ದು, ಅವರು 9.6 ರ ಸರಾಸರಿಯಲ್ಲಿ ರನ್ ನೀಡಿದ್ದಾರೆ. ಈ ಪಟ್ಟಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ಮೂರನೇ ಸ್ಥಾನ, ಲಖನೌ ನಾಲ್ಕನೇ ಮತ್ತು ಚೆನ್ನೈ ಐದನೇ ಸ್ಥಾನದಲ್ಲಿದೆ.
ಮುಂಬೈ ವೇಗದ ಬೌಲರ್ಗಳು ಒಟ್ಟಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕಾಗಿ, ಎದುರಾಳಿ ತಂಡಗಳು ಮುಂಬೈ ವಿರುದ್ಧ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗುತ್ತಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಡೇನಿಯಲ್ ಸಾಮ್ಸ್ ಮತ್ತು ಜಸ್ಪ್ರೀತ್ ಬುಮ್ರಾ ದುಬಾರಿ ಎನಿಸಿದರೆ, ಥಂಪಿ ಮತ್ತು ಮಿಲ್ಸ್ ಉತ್ತಮ ಪ್ರದರ್ಶನ ನೀಡಿದ್ದರು. ಇದಾದ ಬಳಿಕ ಥಂಪಿ ಹಾಗೂ ಪೊಲಾರ್ಡ್ ಎರಡನೇ ಪಂದ್ಯದಲ್ಲಿ ದುಬಾರಿ ಎನಿಸಿಕೊಂಡರು. ಬುಮ್ರಾ ಮತ್ತು ಮಿಲ್ಸ್ ಉತ್ತಮ ಬೌಲಿಂಗ್ ಮಾಡಿದರು. ಮೂರನೇ ಪಂದ್ಯದಲ್ಲಿ ಥಂಪಿ ಮತ್ತು ಬುಮ್ರಾ ಉತ್ತಮ ಪ್ರದರ್ಶನ ನೀಡಿದರೆ, ಸ್ಯಾಮ್ಸ್ ಮತ್ತು ಮಿಲ್ಸ್ ರನ್ ನೀಡಿ ಕೈ ಸುಟ್ಟುಕೊಂಡರು. ಇದರಿಂದಾಗಿ ಮುಂಬೈ ತಂಡ ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ.