ಟೀಮ್ ಇಂಡಿಯಾ ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಮೈಂಡ್ ಗೇಮ್ ಶುರುವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಇಂಗ್ಲೆಂಡ್ ಅದೇ ಮೂಡ್ನಲ್ಲಿ ಆಟಕ್ಕಿಳಿಯಲಿದೆ. ಇಂಗ್ಲೆಂಡ್ ತಂಡದ ಹೊಸ ನಾಯಕ ಬೆನ್ ಸ್ಟೋಕ್ಸ್ ಕೂಡ ರೋಹಿತ್ ಶರ್ಮಾ ಬಳಗಕ್ಕೆ ವಾರ್ನಿಂಗ್ ನೀಡಿದ್ದಾರೆ.
ಕಳೆದ ವರ್ಷ ಇಂಗ್ಲೆಂಡ್, ಟೀಮ್ ಇಂಡಿಯಾ ವಿರುದ್ಧ ಆಡುವಾಗ ವಿಭಿನ್ನ ವಿಶ್ವಾಸದಲ್ಲಿತ್ತು. ಹಲವು ಆಟಗಾರರು ಗಾಯದಿಂದ ಬಳಲಿದ್ದರು. ಆದರೆ ಈ ಬಾರಿ ಸೀನ್ ಬೇರೆ ಇದೆ. ಇಂಗ್ಲೆಂಡ್ ಫುಲ್ ಫಿಟ್ ಅಂಡ್ ಫೈನ್ ಅಕ್ರಮಣಕಾರಿ ಆಟದಿಂದಲೇ ಎದುರಾಳಿಗೆ ಕಡಿವಾಣ ಹಾಕುವುದಾಗಿ ಎಚ್ಚರಿಸಿದೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಇಂಗ್ಲೆಂಡ್ ತನ್ನ ಅಕ್ರಮಣಕಾರಿ ಆಟದಿಂದಲೇ ಯಶಸ್ಸು ಸಾಧಿಸಿತ್ತು. ಬ್ಯಾಟಿಂಗ್ನಲ್ಲಿ ಜಾನಿ ಬೇರ್ ಸ್ಟೋವ್ ನೀಡಿದ ಅಕ್ರಮಣಕಾರಿ ಪ್ರದರ್ಶನ ನ್ಯೂಜಿಲೆಂಡ್ ಬೌಲರ್ಗಳ ಯೋಜನೆಗಳನ್ನು ಉಲ್ಟಾ ಮಾಡಿತ್ತು. ಈಗ ಅದೇ ಗೇಮ್ ಪ್ಲಾನ್ ಅನ್ನು ಟೀಮ್ ಇಂಡಿಯಾ ವಿರುದ್ಧ ಪ್ರಯೋಗಿಸಲು ಇಂಗ್ಲೆಂಡ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಟೀಮ್ ಇಂಡಿಯಾ ಇಂಗ್ಲೆಂಡ್ನ ಪ್ಲಾನ್ಗಳಿಗೆ ಕೌಂಟರ್ ಪ್ಲಾನ್ ಮಾಡುತ್ತಿದೆ. ಹೊಸ ಚೆಂಡಿನಲ್ಲಿ ಇಂಗ್ಲೆಂಡ್ ಬೌಲರ್ಗಳಿಗೆ ವಿಕೆಟ್ ಕೊಡದೇ ಇದ್ರೆ ಮ್ಯಾಚ್ ನಮ್ಮದೇ ಅನ್ನುವ ಪ್ಲಾನ್ ಟೀಮ್ ಇಂಡಿಯಾದ್ದಾಗಿದೆ. ಒಟ್ಟಿನಲ್ಲಿ ಎರಡು ಇನ್ ಫಾರ್ಮ್ ತಂಡಗಳ ಹೋರಾಟ ನಿಜಕ್ಕೂ ಕುತೂಹಲ ಕೆರಳಿಸಿದೆ.