ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಬರೋಬ್ಬರಿ 725 ರನ್ ಗೆಲುವು ಸಾಧಿಸಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಉತ್ತರಾಖಂಡ್ ತಂಡವನ್ನು 69 ರನ್ಗೆ ಆಲೌಟ್ ಮಾಡುವ ಮೂಲಕ, ಮುಂಬೈ ರಣಜಿ ಕ್ರಿಕೆಟ್ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ 647/8d ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್ನಲ್ಲಿ 261/3ಕ್ಕೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ವಿಶ್ವದಲ್ಲೇ ಅತಿ ಹೆಚ್ಚು ರನ್ ಅಂತರದಿಂದ ಗೆಲುವು ಸಾಧಿಸಿದೆ ಮೊದಲ ತಂಡವಾಗಿ ಮುಂಬೈ ಹೊರಹೊಮ್ಮಿದೆ.
ಮುಂಬೈ ತಂಡ 2ನೇ ಇನ್ನಿಂಗ್ಸ್ನಲ್ಲಿ ಪೃಥ್ವಿ ಷಾ 72, ಯಶಸ್ವಿ ಜೈಸ್ವಾಲ್ 103 ಮತ್ತು ಆದಿತ್ಯ ತಾರೆ ಸಿಡಿಸಿದ 57 ರನ್ಗಳ ನೆರವಿನಿಂದ 261 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನ್ನಂಗ್ಸ್ನಲ್ಲಿ ಉತ್ತರಾಖಂಡ 114 ರನ್ಗಳಿಗೆ ಆಲೌಟ್ ಆಗಿದ್ದರಿಂದ 795ರ್ಗಳ ಗುರಿ ನೀಡಲಾಗಿತ್ತು. 2ನೇ ಇನ್ನಿಂಗ್ಸ್ನಲ್ಲೂ ಉತ್ತರಾಖಂಡ 69 ರನ್ಗಳಿಗೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರ್:
ಮುಂಬೈ: 647/8 ಡಿಕ್ಲೇರ್ ಮತ್ತು 261/3 ಡಿಕ್ಲೇರ್
ಉತ್ತರಾಖಂಡ್: 114 ಮತ್ತು 69
ಮತ್ತೊಂದು ಪಂದ್ಯದಲ್ಲಿ ಮಧ್ಯ ಪ್ರದೇಶ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. 2ನೇ ಇನ್ನಿಂಗ್ಸ್ನಲ್ಲಿ ಪಂಜಾಬ್ 203 ರನ್ಗಳಿಗೆ ಆಲೌಟ್ ಆಗಿತ್ತು. 26 ರನ್ಗಳ ಗುರಿಯನ್ನು ಮಧ್ಯಪ್ರದೇಶ ಸುಲಭವಾಗಿ ತಲುಪಿತು.
ಸಂಕ್ಷಿಪ್ತ ಸ್ಕೋರ್:
ಪಂಜಾಬ್ 219 ಮತ್ತು 203
ಮಧ್ಯ ಪ್ರದೇಶ: 397 ಮತ್ತು 26/0