cricket news ತೀಕ್ಷ್ಣ ಮನಸ್ಥಿತಿಯ ಕ್ರಿಕೆಟಿಗ ಎಮ್. ಎಸ್. ಧೋನಿ – ಮಾಜಿ ಗುರು ಗ್ರೆಗ್ ಚಾಪೆಲ್ ಬಣ್ಣನೆ..!
ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದ ಬಗ್ಗೆ ಹೇಳುವುದೇ ಬೇಡ. ಟೀಮ್ ಇಂಡಿಯಾದ ನಾಯಕನಾಗಿ ಧೋನಿ ಮಾಡಿರುವ ಸಾಧನೆಯೇ ಎಲ್ಲರ ಕಣ್ಣ ಮುಂದೆ ಇದೆ. ಹಾಗಾಗಿ ಧೋನಿಯವರ ನಾಯಕತ್ವದ ಬಗ್ಗೆ ಯಾರು ಕೂಡ ಪ್ರಶ್ನೆ ಮಾಡುವಂಗಿಲ್ಲ. ಅಷ್ಟರ ಮಟ್ಟಿಗೆ ನಾಯಕನಾಗಿ ಧೋನಿ ಟೀಮ್ ಇಂಡಿಯಾವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಿದ್ದಾರೆ. ಧೋನಿ ಹೆಸರಿಗೂ ವಿಶ್ವ ಕ್ರಿಕೆಟ್ ನಲ್ಲಿ ಪ್ರತ್ಯೇಕ ಸ್ಥಾನ ಮಾನ ಸಿಕ್ಕಿದೆ.
ಇದೀಗ ಧೋನಿಯ ನಾಯಕತ್ವದ ಗುಣಗಳನ್ನು ಟೀಮ್ ಇಂಡಿಯಾದ ಮಾಜಿ ಗುರು ಗ್ರೆಗ್ ಚಾಪೆಲ್ ಬಣ್ಣನೆ ಮಾಡಿದ್ದಾರೆ. ಧೋನಿ ತೀಕ್ಷ್ಣ ಮನಸ್ಥಿತಿಯ ಕ್ರಿಕೆಟಿಗ. ತಾಂತ್ರಿಕವಾಗಿ ಮತ್ತು ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲೇ ಅರಿತುಕೊಳ್ಳುವ ಚಾಣಕ್ಯತನ ಅವರಲ್ಲಿದೆ. ಮೈದಾನದಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಕಾರ್ಯತಂತ್ರಗಳು ಅದ್ಭುತವಾಗಿರುತ್ತಿದ್ದವು ಎಂದು ಚಾಪೆಲ್ ಹೇಳಿದ್ದಾರೆ.
mahendra singh dhoni sports karnataka
ಧೋನಿ ವಿವಿಧ ತಾಣಗಳಲ್ಲಿ ಆಡಿದ್ದಾರೆ. ಅವರಲ್ಲಿ ಕಲಿಯುವ ಗುಣಗಳಿದ್ದವು. ಹೀಗಾಗಿ ಅವರು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಕಾರ್ಯ ತಂತ್ರಗಳನ್ನು ಅಭಿವೃದ್ದಿಪಡಿಸಲು ಸಾಧ್ಯವಾಯ್ತು ಎಂದು ಗ್ರೆಗ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಪಟ್ಟಣಗಳಲ್ಲಿ ಇನ್ನೂ ಕೂಡ ಸರಿಯಾದ ತರಬೇತಿ ಕೇಂದ್ರಗಳು ಇಲ್ಲ. ಹುಡುಗರು ಆಟವನ್ನು ಬೀದಿಗಳಲ್ಲಿ , ಖಾಲಿ ಜಾಗದಲ್ಲಿ ಆಡುತ್ತಿರುತ್ತಾರೆ. ಅವರಿಗೆ ಸೂಕ್ತ ತರಬೇತುದಾರರು ಇಲ್ಲ. ಆದ್ರೂ ಭಾರತದ ಸ್ಟಾರ್ ಆಟಗಾರರು ಇದೇ ರೀತಿಯಲ್ಲಿ ಆಡಿ ಆಟವನ್ನು ಕಲಿತಿದ್ದಾರೆ ಎಂದು ಚಾಪೆಲ್ ಹೇಳಿದ್ದಾರೆ.
MS Dhoni is one of the sharpest cricket minds – Greg Chappell
ಇದೇ ವೇಳೆ ಆಶಷ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಇಂಗ್ಲೆಂಡ್ ತಂಡದ ಕಳಪೆ ಪ್ರದರ್ಶನ ಕಾರಣಗಳು ಏನು ಎಂಬುದನ್ನು ಕೂಡ ಚಾಪೆಲ್ ಖಾರವಾಗಿಯೇ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಕೋಚಿಂಗ್ ವಿಧಾನವೇ ಸರಿ ಇಲ್ಲ. ಬ್ಯಾಟ್ಸ್ ಮೆನ್ ಗಳು ತಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಅನಾವರಣಗೊಳಿಸಲು ಯಾವ ರೀತಿಯ ಕಾರ್ಯ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ರು./