BIG blow for Pakistan- ಪಾಕ್ ಪ್ರವಾಸವನ್ನು ಬಿಟ್ಟು ಐಪಿಎಲ್ ಆಡಲಿರುವ ಆಸೀಸ್ ನ ಸ್ಟಾರ್ ಆಟಗಾರರು..?
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪಾಕಿಸ್ತಾನ ನೆಲದಲ್ಲಿ ಮೂರು ಟೆಸ್ಟ್, ಮೂರು ಏಕದಿನ ಮತ್ತು ಏಕೈಕ ಟಿ-20 ಪಂದ್ಯವನ್ನು ಆಡಲಿದೆ. ಆಸ್ಟ್ರೇಲಿಯಾದ ಪಾಕ್ ಪ್ರವಾಸ ಮಾರ್ಚ್ 3ರಿಂದ ಆರಂಭವಾಗಲಿದೆ.
ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಮುಂದಾಗಿದ್ರೂ ಆಸೀಸ್ ಆಟಗಾರರು ಆಡ್ತಾರೋ ಇಲ್ವೋ ಅನ್ನೋದು ಇನ್ನೂ ಖಚಿತವಾಗಿಲ್ಲ. ಪಾಕ್ ನಲ್ಲಿ ಭಯೋತ್ಪಾನೆಯ ಚಟುವಟಿಕೆ ಹೆಚ್ಚುತ್ತಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಆಸೀಸ್ ಆಟಗಾರರು ಪಾಕ್ ಪ್ರವಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ಆಸೀಸ್ ಮತ್ತು ಪಾಕ್ ನಡುವಿನ ಕ್ರಿಕೆಟ್ ಸರಣಿಗೆ ಐಪಿಎಲ್ ಕೂಡ ಅಡ್ಡಿಯನ್ನುಂಟು ಮಾಡುತ್ತಿದೆ.
BIG blow for Pakistan- Australia players may leave tour early for IPL 2022
15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ ಕೊನೆಯಲ್ಲಿ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರಾದ ಸ್ಟೀವನ್ ಸ್ಮಿತ್, ಗ್ಲೇನ್ ಮ್ಯಾಕ್ಸ್ ವೆಲ್, ಮಾರ್ಕಸ್ ಸ್ಟೋನಿಸ್, ಪ್ಯಾಟ್ ಕಮಿನ್ಸ್ ಡೆವಿಡ್ ವಾರ್ನರ್ ಸೇರಿದಂತೆ ಐಪಿಎಲ್ ನಲ್ಲಿ ಆಡಲಿರುವ ಆಟಗಾರರು ಪಾಕ್ ಪ್ರವಾಸವನ್ನು ಮೊಟಕುಗೊಳಿಸಿ ಭಾರತದಲ್ಲಿ ಐಪಿಎಲ್ ಟೂರ್ನಿಯನ್ನು ಆಡಲಿದ್ದಾರೆ. ಅಲ್ಲದೆ ಐಪಿಎಲ್ ನಲ್ಲಿ ಆಡಲಿರುವ ಆಸೀಸ್ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ಕೂಡ ನೀಡಿದೆ.
ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಇದು ಕೂಡ ಆಘಾತವನ್ನುಂಟು ಮಾಡಿದೆ. ಹಾಗೇ ಪಿಸಿಬಿ ಮತ್ತೆ ಬಿಸಿಸಿಐಯನ್ನು ಕೆಂಗಣ್ಣಿನಿಂದ ನೋಡುವಂತೆ ಮಾಡಿದೆ.
ಏತನ್ಮಧ್ಯೆ, ಆಸೀಸ್ ಆಟಗಾರರು ಪಾಕ್ ಪ್ರವಾಸಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ದಿನ ಪತ್ರಿಕೆ ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಕೂಡ ವರದಿ ಮಾಡಿದೆ.
ಇನ್ನೊಂದೆಡೆ ಆಸ್ಟ್ರೇಲಿಯಾ 24 ವರ್ಷಗಳ ನಂತರ ಅಂದ್ರೆ 1998ರ ಬಳಿಕ ಮೊದಲ ಬಾರಿಗೆ ಪಾಕ್ ನೆಲದಲ್ಲಿ ಕ್ರಿಕೆಟ್ ಆಡಲು ಮುಂದಾಗಿದೆ. ಈ ನಡುವೆ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಕೊನೆಯ ಕ್ಷಣದಲ್ಲಿ ಪಾಕ್ ಪ್ರವಾಸವನ್ನು ಮೊಟಕುಗೊಳಿಸಿದ್ದವು. ಹೀಗಾಗಿ ಆಸೀಸ್ ಆಟಗಾರರು ಕೂಡ ಪಾಕ್ ನೆಲದಲ್ಲಿ ಕ್ರಿಕೆಟ್ ಆಡ್ತಾರೋ ಅನ್ನೋದು ಇನ್ನೂ ನಿಗೂಢವಾಗಿದೆ.