MS DHONI- ಧೋನಿ ವಿಕೆಟ್ ಕೀಪಿಂಗ್ ಒಂದು ಪಾಠ ಶಾಲೆ..!
ಮಹೇಂದ್ರ ಸಿಂಗ್ ಧೋನಿ.. ಟೀಮ್ ಇಂಡಿಯಾದ ಎವರ್ ಗ್ರೀನ್ ಕೂಲ್ ಕ್ಯಾಪ್ಟನ್. ತನ್ನ 15 ವರ್ಷಗಳ ಸುದೀರ್ಘ ಕ್ರಿಕೆಟ್ ಬದುಕಿನಲ್ಲಿ ನಡೆದು ಬಂದ ಹಾದಿ ಯುವ ಕ್ರಿಕೆಟಿಗರಿಗೆ ಸ್ಫೂರ್ತಿ ಮತ್ತು ಮಾದರಿ.
ಹೌದು, ಧೋನಿ ಮಹಾನ್ ಕ್ರಿಕೆಟಿಗನಾಗಿ ರೂಪುಗೊಂಡಿದ್ದು ರಾತ್ರೊ ರಾತ್ರಿಯಲ್ಲ. ಬದಲಾಗಿ ಹಲವು ವರ್ಷಗಳ ಶ್ರಮವಿದೆ. ಅದರಲ್ಲೂ ಅವರ ವಿಕೆಟ್ ಕೀಪಿಂಗ್ ನ ವೇಗ ಮತ್ತು ಕೌಶಲ್ಯತೆಯನ್ನು ಯಾರು ಹೇಳಿಕೊಟ್ಟಿಲ್ಲ. ಬದಲಾಗಿ ಧೋನಿಯೇ ಕಲಿತುಕೊಂಡು ಆ ಮಟ್ಟಕ್ಕೆ ಬೆಳೆದು ಬಂದಿರುವುದು.
ಇದೀಗ ಧೋನಿಯ ವಿಕೆಟ್ ಕೀಪಿಂಗ್ ಕೌಶಲ್ಯತೆಯ ಬಗ್ಗೆ ಟೀಮ್ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಧೋನಿಯ ವಿಕೆಟ್ ಕೀಪಿಂಗ್ ಕೌಶಲ್ಯಕ್ಕೆ ಸ್ವತಃ ಧೋನಿಯೇ ಪಾಠಶಾಲೆ ಅಥವಾ ಸಂಸ್ಥೆ. ಯಾಕಂದ್ರೆ ಧೋನಿ ತನ್ನ ವಿಕೆಟ್ ಕೀಪಿಂಗ್ ಕೌಶಲ್ಯತೆಗಳನ್ನು ಹಂತ ಹಂತವಾಗಿ ಸುಧಾರಣೆ ಮಾಡಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಪಂದ್ಯದಿಂದ ಪಂದ್ಯಕ್ಕೆ ಕಲಿತುಕೊಂಡು, ಅರಿವು ಮೂಡಿಸಿಕೊಂಡು ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿರುವುದು ಎಂಬುದು ಆರ್ . ಶ್ರೀಧರ್ ಅವರ ಅಭಿಮತವಾಗಿದೆ.
ಎಮ್. ಎಸ್. ಧೋನಿ ದಿ ವಿಕೆಟ್ ಕೀಪರ್. ಅದು ಅವರೇ ಮಾಡಿಕೊಂಡ ಸಂಸ್ಥೆ ಅಥವಾ ಪಾಠ ಶಾಲೆ. ಈ ಬಗ್ಗೆ ಪುಸ್ತಕದಲ್ಲಿ ಬರೆಯಬಹುದು. ಆದ್ರೆಎ ಅವರ ಕೌಶಲ್ಯಗಳು ರಾತ್ರೋ ರಾತ್ರಿ ಬಂದಿರುವುದಲ್ಲ. ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆ ಮತ್ತು ಅರಿವು ಮೂಡಿಸಿಕೊಂಡು ಅತ್ಯುತ್ತಮ ಮಟ್ಟಕ್ಕೆ ಬೆಳೆದಿರುವುದು ಎಂದು ಆರ್. ಶ್ರೀಧರ್ ಅವರು ಧೋನಿಯವರ ವಿಕೆಟ್ ಕೀಪಿಂಗ್ ಶೈಲಿಯನ್ನು ಗುಣಗಾನ ಮಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯವರ ಅತ್ಯುತ್ತಮ ಸ್ಟಂಪಿಂಗ್ ಬಗ್ಗೆಯೂ ಆರ್. ಶ್ರೀಧರ್ ನೆನಪು ಮಾಡಿಕೊಂಡಿದ್ದಾರೆ. ಇದೇ ವೇಳೆ ಯುವ ಕ್ರಿಕೆಟಿಗರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. 2016ರಲ್ಲಿ ಧೋನಿ ಮಾಡಿರುವ ಕೆಲವೊಂದು ಸ್ಟಂಪಿಂಗ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದೇ ರೀತಿ ಯುವ ಆಟಗಾರರಿಗೆ ವಾರ್ನ್ ಕೂಡ ಮಾಡಿದ್ದಾರೆ. ಧೋನಿ ಮಾಡಿರುವ ಸ್ಟಂಪಿಂಗ್ ಗಳನ್ನು ಮನೆಯಲ್ಲಿ ಅಥವಾ ಅಭ್ಯಾಸದ ವೇಳೆ ಮಾಡಬೇಡಿ ಎಂದು ಹೇಳಿದ್ದಾರೆ.
ಯಾಕಂದ್ರೆ ಧೋನಿ ಆಟದ ಮೇಲೆ ಪ್ರಬುದ್ಧತೆ ಮತ್ತು ಹಿಡಿತ ಸಾಧಿಸಿದ್ದ ನಂತರ ಈ ರೀತಿಯ ಸ್ಟಂಪಿಂಗ್ ಗಳನ್ನು ಮಾಡಿದ್ದಾರೆ. ಇದಕ್ಕಾಗಿ ಲಕ್ಷಾಂತರ ಎಸೆತಗಳನ್ನು ವಿಕೆಟ್ ಹಿಂದುಗಡೆ ಹಿಡಿದ್ದಾರೆ. ಹಾಗಾಗಿ ಅವರು ಆ ರೀತಿಯ ಸ್ಟಂಪಿಂಗ್ ಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ತನ್ನ ಕ್ರಿಕೆಟ್ ಬದುಕಿನಲ್ಲಿ ಒಟ್ಟು 195 ಸ್ಟಂಪಿಂಗ್ ಗಳನ್ನು ಮಾಡಿದ್ದಾರೆ.
2004ರಲ್ಲಿ ಬಾಂಗ್ಲಾ ದೇಶ ವಿರುದ್ದ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದ ಧೋನಿ, 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. MS DHONI- Institution in himself: R Sridhar lauds ‘wicketkeeper
ಟೀಮ್ ಇಂಡಿಯಾಗೆ ವಿಕೆಟ್ ಕೀಪರ್ ಆಗಿ ಸೇರಿಕೊಂಡ ಧೋನಿ, 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಏಕೈಕ ನಾಯಕ ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.
ವಿಕೆಟ್ ಹಿಂದುಗಡೆ ನಿಂತುಕೊಂಡು ಕ್ಷಣ ಮಾತ್ರದಲ್ಲೇ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಧೋನಿಯವರನ್ನು ಕೂಲ್ ಕ್ಯಾಪ್ಟನ್ ಎಂದೇ ಕರೆಯಲಾಗುತ್ತಿತ್ತು. ಧೋನಿಯ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅದ್ಭುತ ಸಾಧನೆಯನ್ನು ಮಾಡಿದೆ.