ಆರ್ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತ ಕಾರಣ ಪ್ಲೇ ಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್
ಇಂದು ಎಲಿಮಿನೇಟರ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಲಖನೌ ವಿರುದ್ಧ ಐಪಿಎಲ್ನಲ್ಲಿ ಆಡಿರುವ ಮೂರು ಪಂದ್ಯಗಳನ್ನು ಕೈಚೆಲ್ಲಿರುವ ಮುಂಬೈ ಇಂಡಿಯನ್ಸ್ ಮೊದಲ ಗೆಲುವಿಗಾಗಿ ತುಡುಯುತ್ತಿದೆ.
ಈ ಟೂರ್ನಿಯ ಆರಂಭದಲ್ಲಿ ಕಳಪೆ ಆರಂಭ ನೀಡಿ ನಂತರ ಬ್ಯಾಟರ್ಗಳ ಸಹಾಯದಿಂದ ಪ್ಲೇ ಆಫ್ ವರೆಗೂ ಬಂದಿದೆ.4 ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಬೆನ್ನತ್ತಿ ಗೆದ್ದಿರುವ ಮುಂಬೈ ನಾಯಕ ರೋಹಿತ್ ಶರ್ಮಾ, ಇಶಾನ್ ಕಿಶನ್ ಸೂರ್ಯ ಕುಮಾರ್, ಕ್ಯಾಮರೊನ್ ಗ್ರೀನ್ ಮೇಲೆ ವಿಶ್ವಾಸವಿರಿಸಿದೆ.
ಆರ್ಚರ್ ಮತ್ತು ಬೆಹ್ರನ್ ಡೊರ್ಫ್, ಆಕಾಶ್ ಸಮಾಧಾನಕರ ಪ್ರದರ್ಶನ ನಿಡುತ್ತಿದ್ದು ಚೆಪಾಕ್ನ ಸ್ಪಿನ್ ಸ್ನೇಹಿ ಪಿಚ್ ನಲ್ಲಿ ಮುಂಬೈ ಪಿಯೂಷ್ ಚಾವ್ಲಾ ಅವರನ್ನು ಚೆನ್ನಾಗಿ ಬಳಸಿಕೊಳ್ಳಬೇಕಿದೆ.
ಇನ್ನು ಲಖನೌ ತಂಡ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ಕೃನಾಲ್ ಪಾಂಡ್ಯ ನಾಯಕತ್ವದಲ್ಲಿ ಚಾಣಾಕ್ಷ ಮೆರೆದಿದ್ದಾರೆ. ಸ್ಟೋಯ್ನಿಸ್, ನಿಕೊಲೊಸ್ ಪೂರಾನ್ ಮೇಲೆ ಹೆಚ್ಚು ನಂಬಿಕೆ ಇಡಲಾಗಿದೆ. ರವಿ ಬಿಷ್ಣೋಯಿ ಹೆಚ್ಚು ವಿಶ್ವಾಸವಿರಿಸಲಾಗಿದೆ.
ಮೇಲ್ನೋಟಕ್ಕೆ ಲಖನೌ ಬಲಿಷ್ಠವಾಘಿ ಕಂಡರೂ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ.