ಆರಂಭದ ಎರಡು ಪಂದ್ಯಗಳನ್ನು ಸೋತು ನಂತರ ಪುಟಿದೆದ್ದ ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫೈಯರ್ 2 ಪ್ರವೇಶಿಸಿದೆ.
ಆರನೆ ಪ್ರಶಸ್ತಿ ಗೆಲ್ಲಲು ಒಂದು ಹೆಜ್ಜೆ ಮುಂದಿಟ್ಟಿದೆ. ಲಖನೌ ವಿರುದ್ಧ 81 ರನ್ಗಳ ಭರ್ಜರಿ ಗೆಲುವು ದಾಖಲಿಸಿತು.ಲಖನೌ ಎರಡನೆ ಬಾರಿಯೂ ಎಲಿಮಿನೇಟೆರ್ನಲ್ಲಿ ಅಭಿಯಾನ ಕೊನಗೊಂಡಿತು.
ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 182 ರನ್ ಕಲೆ ಹಾಕಿತು. ಲಖನೌ ತಂಡ 16.3 ಓವ್ಗಳಲ್ಲಿ 101 ರನ್ಗಳಿಗೆ ಸರ್ವಪತನ ಕಂಡಿತು.
ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಲಖನೌ ತಂಡ 4 ಓವರ್ ಕಳೆಯುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡಿತು.ನಂತರ
ಮಾರ್ಕಸ್ ಸ್ಟೋಯ್ನಿಸ್ ಭರವಸೆ ಮೂಡಿಸಿದರು. ಆದರೆ ಇತರೆ ಆಟಗಾರರು ಕೈಯಿಡಿಯಲಿಲ್ಲ.ಮಾರ್ಕಸ್ ಸ್ಟೋಯ್ನಿಸ್ 27 ಎಸೆತದಲ್ಲಿ 40 ರನ್ ಗಳಿಸಿ ಮುನ್ನಗುತ್ತಿದ್ದಾಗ ರನೌಟ್ ಬಲೆಗೆ ಬಿದ್ದರು.
ಮುಂಬೈ ಪರ ಆಕಾಶ್ ಮಧ್ವಾಲ್ 5 ರನ್ಗೆ 5 ವಿಕೆಟ್ ಪಡೆದರು.
ಇದಕ್ಕೂಮುನ್ ಮುಂಬೈ ಪರ ರೋಹಿತ್ 11, ಇಶಾನ್ ಕಿಶನ್ 15 ರನ್,ಕ್ಯಾಮರೊನ್ ಗ್ರೀನ್ 41, ಸೂರ್ಯ ಕುಮಾರ್ 33 ರನ್ ಗಳಿಸಿದರು. ತಿಲಕ್ ವರ್ಮಾ 26, ನೇಹಲ್ ವಧೇರಾ 23 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.