ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಶ್ರೀಕಾಂತ್ ಹಾಗು ಪ್ರಣಯ್ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಎರಡನೆ ಸುತ್ತು ಪ್ರವೇಶಿಸಿದ್ದಾರೆ.
ಕೌಲಾಂಲಪುರದಲ್ಲಿ ಮಹಿಳಾ ಸಿಂಗಲ್ಸ್‍ನಲ್ಲಿ ಎರಡು ಬಾರಿ ಒಲಿಂಪಿಕ್ ವಿಜೇತೆ ಪಿ.ವಿ.ಸಿಂಧು ಡೆನ್‍ಮಾರ್ಕ್‍ನ ಲೈನ್ ಕ್ರಿಸ್ಟೊಫರ್ಸೆನ್ ವಿರುದ್ಧ 21-13, 17-21,21-18 ಅಂಕಗಳಿಂದ ಸೋಲಿಸಿ ಮತ್ತೊಮ್ಮೆ ಪ್ರಭುತ್ವ ಮೆರೆದರು. ಈ ಹಿಂದೆ ನಾಲ್ಕು ಬಾರಿ ಸೋಲಿಸಿದ್ದರು.ಎರಡನೆ ಸುತ್ತಿನಲ್ಲಿ ಸಿಂಧು ಜಪಾನ್‍ನ ಅಯಾ ಓಹೊರಿ ವಿರುದ್ಧ ಸೆಣಸಲಿದ್ದಾರೆ.
ಪುರುಷರ ಸಿಂಗಲ್ಸ್‍ನಲ್ಲಿ ವಿಶ್ವದ 9ನೇ ರ್ಯಾಂಕ್ ಆಟಗಾರ ಪ್ರಣಯ್ ವಿಶ್ವದ 6ನೇ ರ್ಯಾಂಕ್ ಆಟಗಾರ ಚೆನ್ ಚೌ ಅವರನ್ನು 16-21, 21-14, 21-13 ಅಂಕಗಳಿಂದ ಸೋಲಿಸಿ ಪ್ರಿಕ್ವಾರ್ಟರ್ ಪ್ರವೇಶಿಸಿದರಯ.
ಮತ್ತೋರ್ವ ಅಗ್ರ ಆಟಗಾರ ಕಿದಂಬಿ ಶ್ರೀಕಾಂತ್ ಫ್ರಾನ್ಸ್ನ ತೊಮ ಜೂನಿಯರ್ ವಿರುದ್ಧ 21-12, 21-16 ಅಂಕಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಥಾಯ್‍ಲೆಂಡ್‍ನ ಕುನ್ಲಾವುಟ್ ವಿತಿಡ್ಸರ್ನ್ ಅವರನ್ನು ಎದುರಿಸಲಿದ್ದಾರೆ.
ಮಹಿಳಾ ಸಿಂಗಲ್ಸ್‍ನಲ್ಲಿ ಅಶ್ಮಿತಾ ಚಾಳಿಹಾ, ಆಜಾರಿಷಿ ಕಶ್ಯಪ್ ಮತ್ತು ಮಳಾವಿಕಾ ಬಾನಸೂದ್ ಮೊದಲ ಸುತ್ತಿನಲ್ಲೆ ನೇರ ಸೋಲು ಕಂಡರು.