ಡೇನ್ ಕ್ಲೀವರ್(78*) ಸ್ಪೋಟಕ ಬ್ಯಾಟಿಂಗ್ ಹಾಗೂ ಮೈಕಲ್ ಬ್ರೇಸ್‌ವೆಲ್(3/5) ಹ್ಯಾಟ್ರಿಕ್(Hat-trick) ನೆರವಿನಿಂದ ಅತಿಥೇಯ ಐರ್ಲೆಂಡ್(Ireland) ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ನ್ಯೂಜಿ಼ಲೆಂಡ್(New Zealand) 88 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಸರಣಿ ಗೆದ್ದುಕೊಂಡಿದೆ.
ಬೆಲ್‌ಫಾಸ್ಟ್‌ನ ಸಿವಿಲ್ ಸರ್ವೀಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ನ್ಯೂಜಿ಼ಲೆಂಡ್, 20 ಓವರ್‌ಗಳಲ್ಲಿ 179/4 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಟಾರ್ಗೆಟ್ ಚೇಸ್ ಮಾಡಿದ ಐರ್ಲೆಂಡ್, ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಕೇವಲ 91 ರನ್‌ಗಳಿಗೆ ಆಲೌಟ್ ಆಗುವ ಮೂಲಕ 88 ರನ್‌ಗಳ ಭಾರೀ ಅಂತರದ ಸೋಲು ಕಂಡಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿ಼ಲೆಂಡ್ 2-0 ಅಂತರದಲ್ಲಿ ಸರಣಿ ತನ್ನದಾಗಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಕಿವೀಸ್ ಪರ ಮಾರ್ಟಿನ್ ಗಪ್ಟಿಲ್(11) ಹಾಗೂ ಫಿನ್ ಅಲೆನ್(35) ಸಾಧಾರಣ ಆರಂಭ ನೀಡಿದರು. ನಂತರ ಕಣಕ್ಕಿಳಿದ ಡೇನ್ ಕ್ಲೀವರ್ 78* ರನ್(55 ಬಾಲ್, 5 ಬೌಂಡರಿ, 4 ಸಿಕ್ಸ್) ಮೂಲಕ ತಂಡಕ್ಕೆ ಆಸರೆಯಾದರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕ್ಲೀವರ್, ತಂಡದ ಮೊತ್ತವನ್ನ ಹೆಚ್ಚಿಸಿದರು. ಇವರಿಗೆ ಸಾಥ್ ನೀಡಿದ ಗ್ಲೆನ್ ಫಿಲಿಪ್ಸ್(23), ಡೆರಿಲ್ ಮಿಚೆಲ್(14) ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ನ್ಯೂಜಿ಼ಲೆಂಡ್ 179/4 ರನ್‌ಗಳ ಕಠಿಣ ಟಾರ್ಗೆಟ್ ನೀಡಿತು. ಐರ್ಲೆಂಡ್ ಪರ ಕ್ರೇಗ್ ಯಂಗ್ ಹಾಗೂ ಜೊಶುವಾ ಲಿಟೆಲ್ ತಲಾ 2 ವಿಕೆಟ್ ಪಡೆದರು.
ಕಿವೀಸ್ ನೀಡಿದ 180 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಐರ್ಲೆಂಡ್ ಆರಂಭದಿಂದಲೇ ಬ್ಯಾಟಿಂಗ್ ವೈಫಲ್ಯ ಕಂಡಿತು. ಆರಂಭಿಕ ಆಟಗಾರ ಪೌಲ್ ಸ್ಟಿರ್ಲಿಂಗ್(21) ಹಾಗೂ ಕೆಳ ಕ್ರಮಾಂಕದಲ್ಲಿ ಮಾರ್ಕ್ ಅಡೈರ್(27) ರನ್‌ಗಳಿಸಿದ್ದು ಬಿಟ್ಟರೆ ಉಳಿದವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಬರಲಿಲ್ಲ. ಇದರಿಂದಾಗಿ ಕಿವೀಸ್ ಪಡೆ 91 ರನ್‌ಗಳಿಗೆ ಆಲೌಟ್ ಆಗಿ ಸರಣಿ ಸೋಲಿನ ಆಘಾತ ಕಂಡಿತು. ಕಿವೀಸ್ ಪರ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿದ ಮೈಕಲ್ ಬ್ರೇಸ್‌ವೆಲ್(5/3) ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರೆ. ಇಶ್ ಸೋಧಿ ಸಹ 3 ವಿಕೆಟ್, ಜೇಕಬ್ ಡಫ್ಫಿ 2 ಹಾಗೂ ಫೆರ್ಗುಸನ್ ತಲಾ 1 ವಿಕೆಟ್ ಪಡೆದರು.
IRE v NZ 2nd T20I: ಮೈಕಲ್ ಬ್ರೇಸ್‌ವೆಲ್ ಹ್ಯಾಟ್ರಿಕ್ ಸಾಧನೆ