Commonwealth Games: ಧನಲಕ್ಷ್ಮಿ ಗೇಮ್ಸ್ ನಿಂದ ಔಟ್, ಭಾರತಕ್ಕೆ ಹಿನ್ನಡೆ
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೂ ಮುನ್ನವೇ ಭಾರತ ಭಾರೀ ಹಿನ್ನಡೆಯಾಗಿದೆ. ಭಾರತದ ಸ್ಟಾರ್ ಸ್ಪ್ರಿಂಟರ್ ಧನಲಕ್ಷ್ಮಿ ಅವರ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ 4×100ಮೀ ರಿಲೇಯಲ್ಲಿ ಭಾರತ ಅಥ್ಲೆಟಿಕ್ ತಂಡ ಪದಕ ಗೆಲ್ಲುವ ಸಾಧ್ಯತೆ ಕಡಿಮೆ.
ಧನಲಕ್ಷ್ಮಿ ಕಳೆದ ವರ್ಷ 100 ಮೀಟರ್ ಓಟದಲ್ಲಿ ದ್ಯುತಿ ಚಂದ್ ಅವರನ್ನು ಹಿಂದಿಕ್ಕಿ ಮೂಲಕ ಸಂಚಲನ ಮೂಡಿಸಿದ್ದರು. ಇದಲ್ಲದೇ ಧನಲಕ್ಷ್ಮಿ ಕಳೆದ ತಿಂಗಳು 200 ಮೀಟರ್ ಓಟದಲ್ಲಿ ಹಿಮಾ ದಾಸ್ ಅವರನ್ನು ಸೋಲಿಸಿದ್ದಾರೆ.

ಬಹಿರಂಗವಾದ ಮಾಹಿತಿಯ ಪ್ರಕಾರ, ಧನಲಕ್ಷ್ಮಿಯ ಮಾದರಿಯನ್ನು ಡೋಪ್ ಪರೀಕ್ಷೆಗೆ ಎಐಯು ತೆಗೆದುಕೊಂಡಿದೆ. ಧನಲಕ್ಷಿಣಿ ಅವರ ಮಾದರಿಯಲ್ಲಿ ಸ್ಟೀರಾಯ್ಡ್‌ಗಳು ಪತ್ತೆಯಾಗಿವೆ. ಇದರಿಂದಾಗಿ ಸದ್ಯಕ್ಕೆ ಧನಲಕ್ಷ್ಮಿ ಮೇಲೆ ನಿಷೇಧ ಹೇರಲಾಗಿದ್ದು, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸುವಂತಿಲ್ಲ. ಇದಲ್ಲದೆ ಯುಗೇನ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸದಂತೆ ಧನಲಕ್ಷ್ಮಿಗೆ ನಿಷೇಧ ಹೇರಲಾಗಿದೆ.
ಕಳೆದ ವರ್ಷ ಭಾರತಕ್ಕಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಧನಲಕ್ಷ್ಮಿ ಭಾಗವಹಿಸಿದ್ದರು. 400 ಮೀಟರ್ಸ್ ರಿಲೇ ಓಟದಲ್ಲಿ ಧನಲಕ್ಷ್ಮಿ ಅವರು ಹಿಮಾ ದಾಸ್ ಮತ್ತು ದ್ಯುತಿ ಚಂದ್ ಅವರೊಂದಿಗೆ ತಂಡದಲ್ಲಿ ಪಾಲ್ಗೊಂಡಿದ್ದರು. ಧನಲಕ್ಷ್ಮಿ ಅವರು 100 ಮೀಟರ್ಸ್ ವಿಭಾಗದಲ್ಲಿ ರಿಲೇ ಓಟದ ಜೊತೆಗೆ ಭಾರತದಿಂದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಿತ್ತು.

ಮಾಧ್ಯಮಗಳ ವರದಿ ಪ್ರಕಾರ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಧನಲಕ್ಷ್ಮಿ ಅಮೆರಿಕಕ್ಕೆ ತೆರಳಿಲ್ಲ. ಚಾಂಪಿಯನ್‌ಶಿಪ್ ಆಯೋಜಕರು ಧನಲಕ್ಷ್ಮಿ ಹೆಸರನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಡೋಪ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದರಿಂದ ಧನಲಕ್ಷ್ಮಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ.