ಟಿ20 ಕ್ರಿಕೆಟ್ ಆರಂಭವಾಗುತ್ತಿದ್ದಂತೆ ದಾಖಲೆಗಳ ಮಾತು ಶುರುವಾಗಿದೆ. ವೆಸ್ಟ್ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಹೊಸ ವಿಶ್ವದಾಖಲೆ ರಚನೆಯಾಗುವುದು ಖಚಿತ. ಆದರೆ ವಿಶ್ವ ದಾಖಲೆ ಮಾಡುವವರು ಯಾರು ಅನ್ನುವ ಪ್ರಶ್ನೆ ಇದೆ. ವಿರಾಟ್ ಕೊಹ್ಲಿ ದಾಖಲೆ ಬರಿತಾರಾ, ಇಲ್ಲ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆಯ ಸರದಾರನಾಗುತ್ತಾರಾ ಅನ್ನುವ ಕುತೂಹಲವಿದೆ.
ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿರುವುದು ನ್ಯೂಜಿಲೆಂಡ್ನ ಮಾರ್ಟಿನ್ ಗಪ್ಟಿಲ್. ಗಪ್ಟಿಲ್ 112 ಪಂದ್ಯಗಳಿಂದ 3299 ರನ್ಗಳಿಸಿದ್ದಾರೆ. 2ನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ 95 ಪಂದ್ಯಗಳಿಂದ 3227 ರನ್ಗಳಿಸಿದ್ದಾರೆ. ರೋಹಿತ್ ಶರ್ಮಾ 119 ಪಂದ್ಯಗಳಿಂದ 3197 ರನ್ಗಳಿಸಿದ್ದಾರೆ.
ಗಪ್ಟಿಲ್ ದಾಖಲೆ ಮುರಿಯಲು ಕೊಹ್ಲಿಗೆ 73 ರನ್ಗಳ ಅವಶ್ಯಕತೆ ಇದೆ.
ರೋಹಿತ್ಗೆ ದಾಖಲೆ ಮುರಿಯಲು 102 ರನ್ಗಳ ಅವಶ್ಯಕತೆ ಇದೆ. ಮೊದಲ ಟಿ20 ಪಂದ್ಯದಲ್ಲಿ ಅಥವಾ ಸರಣಿಯಲ್ಲಿ ಈ ದಾಖಲೆ ಭಾರತೀಯರ ಹೆಸರಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ.